

ಕೊಪ್ಪಳ: ವಿಶ್ವ ಪಾರಂಪಕರಿ ತಾಣ ಹಂಪಿ ಪ್ರದೇಶದಲ್ಲಿ ಬರುವ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಸರ್ಕಾರ 129 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಭೂ ಸ್ವಾಧಿನಕ್ಕೆ ಹಣ ನೀಡುವುದಾಗಿ ತಿಳಿಸಿದ್ದು, ಬಹು ಬೇಡಿಕೆಯ ರೋಪ್ ವೇ ಪಿಪಿಪಿ ಮಾದರಿಯಡಿ ನಿರ್ಮಿಸಲು ತಾತ್ವಿಕ ಸಮ್ಮತಿ ನೀಡಿದೆ.
ರಾಮಾಯಣದ ಆಂಜನೇಯ ಜನಿಸಿದ ಕ್ಷೇತ್ರವೆಂದು ಅಂಜನಾದ್ರಿ ಖ್ಯಾತಿ ಪಡೆದಿದೆ. ಇದಕ್ಕೆ ಪೂರಕ ಐತಿಹ್ಯ, ಉಲ್ಲೇಖಗಳೂ ಇವೆ. ದೇಶ, ವಿದೇಶಗಳಿಂದ ಲಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಶನಿವಾರ, ಭಾನುವಾರ ಸೇರಿ ವಿಶೇಷ ದಿಗಳಲ್ಲಿ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ 20 ಕೋಟಿ ರೂ.ಗಳಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಬಜೆಟ್ನಲ್ಲಿ ಹೆಚ್ಚುವರಿ 100 ಕೋಟಿ ರೂ. ಘೋಷಿಸಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.
ಪ್ರದಣ ಪಥ, ಸ್ನಾನ ಟ್ಟ, ಶೌಚಗೃಹ, ಪಾರ್ಕಿಂಗ್, ಪ್ರಸಾದ ನಿಲಯ, ರಸ್ತೆ ಅಗಲೀಕರಣ, ಧ್ವನಿ, ಬೆಳಕು, ಕುಡಿವ ನೀರು, ನೆರಳು, ರಾಮಾಯಣ ಬಿಂಬಿಸುವ ಕಲಾಕೃತಿ ಹೀಗೆ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಠಾನಕ್ಕೆ ಮುಂದಾಗಿದೆ. ಜತೆಗೆ ಕಾಮಗಾರಿ ಕೈಗೊಳ್ಳಲು ಬೇಕಾದ ಹೆಚ್ಚುವರಿ ಖಾಸಗಿ ಭೂ ಸ್ವಾಧಿನಕ್ಕೆ ಪ್ರತ್ಯೇಕವಾಗಿ 29.51 ಕೋಟಿ ರೂ.ಗಳನ್ನು ಬಿಡುಗಡೆಗೆ ಅನುಮೋದಿಸಿದೆ. ಕೆಲ ವರ್ಷಗಳ ಹಿಂದೆ ದೇವಾಲಯ ಮುಜರಾಯಿ ಇಲಾಖೆ ವಶಕ್ಕೆ ಬಂದಿದ್ದು, ಸಾಕಷ್ಟು ಆದಾಯ ಗಳಿಸುತ್ತಿದೆ. ಭಕ್ತರ ಸಂಖ್ಯೆಗೆ ತಕ್ಕಂತೆ ಸೌಕರ್ಯ ಕಲ್ಪಿಸುವ ಜರೂರಿದೆ. ಕಾಮಗಾರಿಗಳಿಗೆ ತಗಲುವ ವೆಚ್ಚದಲ್ಲಿ ಮೂರನೇ ಒಂದು ಭಾಗದಷ್ಟು ಕೆಕೆಆರ್ಡಿಬಿಯಿಂದ ಪಡೆದು ಅನುಷ್ಠಾನಗೊಳಿಸಲು ಸರ್ಕಾರ ಸೂಚಿಸಿದೆ.
ರೋಪ್ವೇ ಗೆ ಬೇಕು ಆಸಕ್ತಿ
ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ವಶಕ್ಕೆ ಬಂದಾಗಿನಿಂದಲೂ ರೋಪ್ ವೇ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಕೆಳಗಿನಿಂದ ದೇವಾಲಯವರೆಗೆ 575 ಮೆಟ್ಟಿಲುಗಳಿದ್ದು, ಹತ್ತಿಕೊಂಡೇ ತೆರಳಬೇಕು. ಕಡಿದಾಗಿದ್ದು, ಸವಾಲಿನ ಕೆಲಸವೂ ಹೌದು. ವೃದ್ಧರು, ಮಕ್ಕಳು, ಅನಾರೋಗ್ಯ ಪೀಡಿತರು ತೆರಳುವುದು ತ್ರಾಸದಾಯಕ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ರೋಪ್ ವೇ ನಿರ್ಮಿಸಲು ಪ್ರಸ್ತಾವನೆ ಸಲ್ಲಿಕೆಯಾಗಿ ಹಲವು ವರ್ಷಗಳಾಗಿವೆ. ಅನೇಕ ಬಾರಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಜತೆಗೆ ಟೆಂಡರ್ ಆಹ್ವಾನಿಸಿ ರದ್ದುಗೊಳಿಸಿದ ಟನೆಗಳೂ ನಡೆದಿವೆ. ಈ ಬಾರಿಯೂ ರೋಪ್ ವೇಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಅನುದಾನ ನಿಗದಿಪಡಿಸಿ ಅನುಷ್ಠಾನಗೊಳಿಸಿದಲ್ಲಿ ಭಕ್ತರಿಗೆ ಅನುಕೂಲವಾಗಲಿದೆ.