ಕೊಪ್ಪಳ: ಅಂಜನಾದ್ರಿ ಹನುಮ ಮಾಲಾ ವಿಸರ್ಜನೆ ಅಂಗವಾಗಿ ಡಿ.13ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿ ನಗರದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಸಂಕೀರ್ತನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಪುಡಂಲೀಕ ದಳವಾಯಿ ತಿಳಿಸಿದರು.
ಕನಕಗಿರಿ ರಸ್ತೆಯ ಎಪಿಎಂಸಿ ಸಮುದಾಯ ಭವನದಿಂದ ಬಾಬು ಜಹ ಜೀವನ ರಾಮ್ ವೃತ್ತವರೆಗೆ ಮೆರಣಿಗೆ ಸಾಗಲಿದೆ. ನಂತರ ಧಾರ್ಮಿಕ ಸಭೆ ಆಯೋಜಿಸಲಾಗಿದೆ. 40 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀೆ ಇದೆ. 2008ರಿಂದಲೇ ಸಂಕೀರ್ತನ ಯಾತ್ರೆ ನಡೆಸುತ್ತಿದ್ದೇವೆ. ಆರಂಭದಲ್ಲಿ ಕೆಲವರು ಭಾಗಿಯಾಗುತ್ತಿದ್ದರು. ಈಗ ಲಾಂತರ ಜನ ಅಂಜನಾದ್ರಿಯತ್ತ ಧಾವಿಸುತ್ತಿದ್ದಾರೆ. ದೈವ ಭಕ್ತಿ ಜತೆಗೆ ರಾಷ್ಟ್ರ ಭಕ್ತಿ, ಹಿಂದು ಧರ್ಮ ಜಾಗೃತಿ ಯಾತ್ರೆ ಉದ್ದೇಶ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಹಿರೇಮಠ, ಬಳ್ಳಾರಿ ವಿಭಾಗ ಕಾರ್ಯದರ್ಶಿ ಅಶೋಕ, ಬಜರಂಗದಳ ವಿಭಾಗ ಸಂಯೋಜಕ ಮಲ್ಲಿಕಾರ್ಜುನ ಇದ್ದರು.