ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ ನಾಳೆ

district koppal anjanadri god anjaneya hanumamala
Published on

ಕೊಪ್ಪಳ: ರಾಮನ ಬಂಟ ಆಂಜನೇಯ ಜನಿಸಿದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ. ಇಂದು ಮಾಲೆ ವಿಸರ್ಜನೆ ಇದ್ದು, ರಾಜ್ಯದ ವಿವಿಧೆಡೆಯಿಂದ ಲಾಂತರ ವ್ರತಧಾರಿಗಳು ಗುರುವಾರದಿಂದಲೇ ಬೆಟ್ಟದತ್ತ ಹೆಜ್ಜೆ ಹಾಕಿದ್ದಾರೆ. ಬರುವ ಭಕ್ತರಿಗೆ ಜಿಲ್ಲಾಡಳಿತ ಮೂಲ ಸೌಕರ್ಯ ಸೇರಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ವರ್ಷದಿಂದ ವರ್ಷಕ್ಕೆ ಅಂಜನಾದ್ರಿ ಕೀರ್ತಿ ಹೆಚ್ಚುತ್ತಿದ್ದು, ಅಸಂಖ್ಯ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ದೇಶ, ವಿದೇಶದಿಂದ ಭಕ್ತರು ಆಗಮಿಸುತ್ತಿದ್ದು, ಸಾಮಾನ್ಯ ದಿನಗಳಲ್ಲೂ ಜನ ಜಂಗುಳಿಯಿಂದ ತುಂಬಿರುತ್ತದೆ. ಹನುಮದ್​ವ್ರತ ಹಿನ್ನೆಲೆಯಲ್ಲಿ ಇಂದು (ಡಿ.13) ವ್ರತಧಾರಿಗಳಿಂದ ಮಾಲೆ ವಿಸರ್ಜನೆ ಜರುಗಲಿದೆ. ಬೆಳಗಿನ ಜಾವ 3 ಗಂಟೆಗೆ ಹೋಮ ಆರಂಭವಾಗಲಿದ್ದು ಮುಗಿಯುತ್ತಲೇ ಮಾಲಾಧಾರಿಗಳು ವ್ರತ ಪೂರ್ಣಗೊಳಿಸಿ ಮಾಲೆ ವಿಸರ್ಜಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಆಗಮಿಸುವವರು ಬುಧವಾರದಿಂದಲೇ ಅಂಜನಾದ್ರಿಗೆ ಆಗಮಿಸುತ್ತಿದ್ದಾರೆ.

ಜಿಲ್ಲಾಡಳಿತ ಮೂರು ದಿನ ಬಂದ ಭಕ್ತರಿಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದೆ. ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀೆ ಇದ್ದು, ಕುಡಿವ ನೀರು, ಪಾರ್ಕಿಂಗ್​, ನೆರಳಿನ ವ್ಯವಸ್ಥೆ, ಸ್ನಾನ ಟ್ಟ, ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆನೆಗೊಂದಿಯಿಂದ ಅಂಜನಾದ್ರಿವರೆಗೆ ಉಚಿತ ಬಸ್​ ಬಿಡಲಾಗಿದೆ. ಜತೆಗೆ ಕೊಪ್ಪಳ, ಗಂಗಾವತಿ, ಹೊಸಪೇಟೆಯಿಂದ ಅಂಜನಾದ್ರಿ ಬೆಟ್ಟಕ್ಕೆ ವಿಶೇಷ ಬಸ್​ ಸೇವೆ ಆರಂಭಿಸಲಾಗಿದೆ. ಬೆಟ್ಟದ ಕಲ್ಲು ಬಂಡೆಗಳ ನಡುವೆ ದೀಪಾಲಂಕಾರ ಮಾಡಿದ್ದು, ಸಂಜೆ ರವಿ ಜಾರುತ್ತಲೇ ಇತ್ತ ಅಂಜನಾದ್ರಿ ಬೆಳಕಿನಲ್ಲಿ ಮಿನುಗುತ್ತಿದೆ.

ಬೆಟ್ಟದಿಂದ ಐದು ಕಿ.ಮೀ. ಉದ್ದಕ್ಕೂ ದೀಪಾಲಂಕಾರ ಮಾಡಿರುವುದು ವಿಶೇಷ. ವಿವಿಧ ಸಮಿತಿಗಳನ್ನು ರಚಿಸಿದ್ದು ಮೂರು ದಿನ ಮುಂಚಿತವಾಗಿಯೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಟ್ಟದ ಮೇಲೆ ಜನಜಂಗುಳಿ ನಿಯಂತ್ರಣಕ್ಕೆ ಬಂದು&ಹೋಗಲು ಪ್ರತ್ಯೇಕ ಮಾರ್ಗ ನಿಗದಿಪಡಿಸಲಾಗಿದೆ. ಪ್ರಸಾದ ವಿತರಣೆಗೆ ಕೌಂಟರ್​ ರಚಿಸಲಾಗಿದೆ.

ಲೈವ್​ ವ್ಯವಸ್ಥೆ : ಆಂಜನೇಯ ಸ್ವಾಮಿ ಬೆಟ್ಟದ ಮೇಲಿದ್ದು 575 ಮೆಟ್ಟಿಲು ಹತ್ತಿಕೊಂಡು ಹೋಗಿ ದರ್ಶನ ಪಡೆಯಬೇಕು. ಕಡಿದಾದ ಬೆಟ್ಟ ಹತ್ತುವುದು ತ್ರಾಸದಾಯಕ ಕೆಲಸ. ಮಕ್ಕಳು, ವೃದ್ಧರು, ಆರೋಗ್ಯ ಸಮಸ್ಯೆ ಇದ್ದವರಿಗಾಗಿ ಬೆಟ್ಟದ ಕೆಳ ಭಾಗದಲ್ಲಿ ಆಂಜನೇಯ ಮೂರ್ತಿ ಇದೆ. ಪಕ್ಕದಲ್ಲೇ ರಾಮನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೂರದ ಭಕ್ತರ ದರ್ಶನಕ್ಕಾಗಿ ಜಿಲ್ಲಾಡಳಿತದಿಂದ ಲೈವ್​ ವ್ಯವಸ್ಥೆ ಮಾಡಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಇತರ ಗಣ್ಯರು ಮಾಲೆಧರಿಸಿದ್ದು ಭಕ್ತರೊಡಗೂಡಿ ವಿಸರ್ಜಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net