ಖಾಲಿ ಹುದ್ದೆಗಳು ಆಗಲಿ ಭರ್ತಿ

district koppal anganawadi workers women and child department
Published on

ಕೊಪ್ಪಳ: ಖಾಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ೆಡರೇಷನ್​ ಜಿಲ್ಲಾ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ 3&4 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ಭರ್ತಿ ಮಾಡಿಲ್ಲ. ಇದರಿಂದ ಕೇಂದ್ರ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಶಾಲಾ ಪೂರ್ವ ಶಿಕ್ಷಣ, ರಜಿಸ್ಟರ್​ ಬರೆಯುವಿಕೆ, ಎ್​ಎಸ್​ಆರ್​ ಮಾಡುವುದು ತೊಂದರೆಯಾಗುತ್ತಿದೆ. ಕೆಲವೊಂದು ಕೇಂದ್ರಗಳಲ್ಲಿ ಅಂಗವಿಕಲ ಕಾರ್ಯಕರ್ತೆಯರಿದ್ದು ಸಹಾಯಕಿಯರಲ್ಲಿದೇ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆಂದು ಅಳಲು ತೋಡಿಕೊಂಡರು.

ಖಾಲಿ ಹುದ್ದೆಗಳನ್ನು ಶ್ರೀ ಭರ್ತಿ ಮಾಡಿ. ಎ್​ಎಸ್​ಆರ್​ ನಿರ್ವಹಣೆ ಕಷ್ಟವಾಗುತ್ತಿದೆ. ಒಟಿಪಿ ಸರಿಯಾಗಿ ಬರುತ್ತಿಲ್ಲ. ನೆಟ್​ವರ್ಕ್​ ಸೇರಿ ಇತರ ಸಮಸ್ಯೆ ಇದ್ದು, ಅದನ್ನು ರದ್ದು ಮಾಡಿ. ಎನ್​ಪಿಎಸ್​ ಹಣ ಬಿಡುಗಡೆ ಮಾಡಿ. ಗ್ರಾಚುಟಿ ಹಣವನ್ನು ನೀಡಿ. ನಿವೇಶನ ರಹಿತ ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿವೇಶ ನೀಡಿ ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ಡಾ.ಕೆ.ಎಸ್​.ಜನಾರ್ದನ, ಎ.ಹುಲುಗಪ್ಪ, ಎ.ಎಲ್​.ತಿಮ್ಮಣ್ಣ, ತುಕರಾಮ್​ ಪಾತ್ರೋಟಿ, ಮುಮತಾಜ್​ಬೇಗಂ, ಚನ್ನಮ್ಮ ನಾಗಣ್ಣವರ, ಶಿವಮ್ಮ ಹುಡೇದ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net