ಶಾಲಾಪೂರ್ವ ಶಿಕ್ಷಣ ಪದ್ಧತಿ ವೀಕ್ಷಣೆ

anganavadi in koppal delegates visit kukanoor
ಕುಕನೂರು ತಾಲೂಕಿನ ಭಾನಾಪುರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡದ ಸದಸ್ಯರಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು.
Published on

ಕೊಪ್ಪಳ: ಜಿಲ್ಲೆಯ ಅಂಗನವಾಡಿಗಳಲ್ಲಿ ನಡೆಸುತ್ತಿರುವ ಶಾಲಾಪೂರ್ವ ಶಿಕ್ಷಣ ಪ್ರಕ್ರಿಯೆಯನ್ನು ಹೈದ್ರಾಬಾದ್​ ಮತ್ತು ರಾಜಸ್ಥಾನದಿಂದ ಸಿಎಂಎ್​ ಹಾಗೂ ಯುನಿಸ್​ೆ ಪದಾಧಿಕಾರಿಗಳು ಇತ್ತೀಚೆಗೆ ವೀಸಿದರು.

ಜೂ.26ರಂದು ತಳಕಲ್​, ಮಂಡಲಗೇರಿ ಅಂಗನವಾಡಿಗಳಿಗೆ ಭೇಟಿ ನೀಡಿ ಚಟುವಟಿಕೆ ವೀಸಿದರು. ಮಕ್ಕಳ ಪ್ರತಿಕ್ರಿಯೆ, ಅಂಗನವಾಡಿ ಕಾರ್ಯಕರ್ತೆಯರ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ನೋಡಿ ಬೆರಗಾದರು. ಕೇಂದ್ರದಲ್ಲಿ ಸ್ವಚ್ಛತೆ, ಮಕ್ಕಳ ಆಹಾರ ಗಮನಿಸಿದರು. ಜೂ.27ರಂದು ಕೊಪ್ಪಳದ ಮೋಚಿವಾಡ, ಕೋಳೂರು ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗೆ ತಯಾರಿಸಿಕೊಂಡ ಸಾಮಗ್ರಿ ಪರಿಶೀಲಿಸಿ, ಕೇಂದ್ರದಲ್ಲಿ ಹೊಂದಿಸಿಕೊಂಡ ವಿಧಾನ ವೀಸಿದರು. ಪೋಷಕರ ನಡೆ ಅಂಗನವಾಡಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಾಲಕರಿಂದ ಮಾಹಿತಿ ಪಡೆದುಕೊಂಡರು.

ಆರು ವರ್ಷ ಪೂರೈಸಿದ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು. ಬಳಿಕ ಸರ್ಕಾರಿ ಶಾಲೆಗೆ ತೆರಳಿದ ತಂಡ ಮುಖ್ಯ, ಸಹ ಶಿಕ್ಷಕರೊಂದಿಗೆ ಸಭೆ ನಡೆಸಿತು. ಶಿಕ್ಷಣ ಕಲಿಕೆ ವಿಧಾನ, ಕೌಶಲ ಕಲಿಕೆ, ಮಕ್ಕಳ ಗುಣ, ಸ್ವಭಾವ ಅರಿತು ಪಾಠ ಮಾಡುವ ಕುರಿತು ವಿವರಿಸಿತು. ಭಾನಾಪುರದಲ್ಲಿ ಪಾಲಕರ ನಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದೊಂದು ಅತ್ಯುತ್ತಮ ವೇದಿಕೆ. ಮುಂದುವರಿಯಲಿ ಎಂದು ಸಲಹೆ ನೀಡಲಾಯಿತು. ಜತೆಗೆ ಕೊಪ್ಪಳದಲ್ಲಿನ ಮಾದರಿಯನ್ನು ತಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ಬಳಿಕ ಜಿಪಂ ಸಿಇಒ ತಂಡದ ಅಧಿಕಾರಿಗಳೊಂದಿಗೆ ಸಭೆ ನಡಸಿ ಚರ್ಚಿಸಿದರು. ಟಾಟಾ ಕಲಿಕಾ ಟ್ರಸ್ಟ್​ನಿಂದ ಪಠ್ಯಕ್ರಮ ರಚಿಸಿ ಶಾಲಾಪೂರ್ವ ಶಿಕ್ಷಣ ನೀಡುತ್ತಿರುವ ಬಗ್ಗೆ ತಿಳಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net