ಷಾ ದೇಶದ ಜನರ ಕ್ಷಮೆ ಕೇಳಲಿ

district koppal amith sha central minister protest
Published on

ಕೊಪ್ಪಳ: ಅಂಬೇಡ್ಕರ್​ ಬಗ್ಗೆ ದ್ವೇಷ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ದೇಶದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಿ ಎಸ್​ಡಿಪಿಐ ಜಿಲ್ಲಾ ಸಂಚಾಲಕರು ಭಾನುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಸತ್​ನಲ್ಲಿ ಅಮಿತ್​ ಶಾ ಅಮಬೇಡ್ಕರ್​ ಬದಲು ದೇವರ ಜಪ ಮಾಡಲು ತಿಳಿಸಿದ್ದಾರೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ. ರಾಜ್ಯದ ಪರಿಷತ್​ನಲ್ಲಿ ವಿಪ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಬಗ್ಗೆ ತುಚ್ಯವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಪದೇ ಪದೆ ಅಸಂವಿಧಾನಿಕ ಪದ ಬಳಕೆ ಮಾಡುತ್ತಿದ್ದಾರೆ. ಇವೆಲ್ಲವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಬಿಜೆಪಿಗರು ಮನುಸ್ಮ$ತಿ, ಸಂ ಪರಿವಾರದ ಚಿಂತನೆಯಲ್ಲಿದ್ದಾರೆ. ಅವರಿಗೆ ಅಧಿಕಾರ ನೀಡಿರುವುದು ಸಂವಿಧಾನ ಎಂಬುದನ್ನು ಮರೆತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್​ ಶಾ ತಕ್ಷಣ ದೇಶದ ಜನರಿಗೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂವಿಧಾನ, ಬಾಬಾ ಸಾಹೇಬ್​ ಅಂಬೇಡ್ಕರ್​ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ಎಸ್​ಡಿಪಿಐ ಕೊಪ್ಪಳ ವಿಧಾನ ಸಭಾ ಅಧ್ಯಕ್ಷ ಸಲೀಂ ಖಾದ್ರಿ, ಪ್ರಮುಖರಾದ ರಾು ಚಾಕ್ರಿ, ಕಾಶಪ್ಪ, ಮುಹಮ್ಮದ್​ ಸಾಧಿಕ್​, ನಿಜಾಮುದ್ದಿನ್​ ಮಾಳೆಕೊಪ್ಪ, ಫಾರೂಕ್​ ಅತ್ತಾರ, ಅರ್ಷದ್​ ಶೈಖ್​, ಪ್ರಕಾಶ್​ ಬೆಲ್ಲದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net