ಸಚಿವ ಷಾ ವಿರುದ್ಧ ಆಗಲಿ ಕ್ರಮ

district koppal amith sha central minister ambedkar issue
Published on

ಕೊಪ್ಪಳ: ಅಂಬೇಡ್ಕರ್​ ಅವರನ್ನು ಅಪಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಷಾ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಾಸ್ಟರ್ಸ್​ ಅಸೋಸಿಯೇಷನ್​ ನೇತೃತ್ವದಲ್ಲಿ ವಿವಿಧ ಸಂಟನೆ ಮುಖಂಡರು ಗುರುವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್​ ಬದಲು ದೇವರನ್ನು ಪ್ರಾರ್ಥಿಸಿ ಎಂದು ಅಮಿತ್​ ಷಾ ಹೇಳಿದ್ದು ಸಮಂಜಸವಲ್ಲ. ದೇಶದ ಇತಿಹಾಸ ಗಮನಿಸಿದರೆ ಶೋಷತರ ಪಾಡು ತಿಳಿಯುತ್ತದೆ. ಅವರನ್ನು ದೇವರು ರಸಲಿಲ್ಲ. ಬದಲಿಗೆ ಅಂಬೇಡ್ಕರ್​ ಬರೆದ ಸಂವಿಧಾನ ರಸಿದೆ. ನಮ್ಮ ಪಾಲಿಗೆ ಅವರೇ ದೇವರು. ದೇವರನ್ನು ಸ್ಮರಿಸಿದ್ದರೆ ನಮ್ಮನ್ನು ಇನ್ನಷ್ಟು ವರ್ಷಗಳ ಕಾಲ ತುಳಿಯುವ ಕೆಲಸವಾಗುತ್ತಿತ್ತು ಎಂದು ಹೇಳಿದರು.

ಅಂಬೇಡ್ಕರ್​ ಅವರನ್ನು ನಿತ್ಯ ನೆನೆಯುವುದೇ ನಮ್ಮ ಬದುಕು. ಸಂವಿಧಾನದಡಿಯೇ ಬದುಕುತ್ತೇವೆ. ಅಂಥವರ ಬಗ್ಗೆ ಅಪಮಾನಕರವಾಗಿ ಮಾತನಾಡಿರುವ ಕೇಂದ್ರ ಮಂತ್ರಿ ಅಮಿತ್​ ಷಾ ದೇಶದ ಜನರ ಕ್ಷಮೆ ಕೇಳಬೇಕು. ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಕೇಂದ್ರ ಸರ್ಕಾರ, ರಾಷ್ಟ್ರಪತಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಾಸ್ಟರ್ಸ್​ ಅಸೋಸಿಯೇಷನ್​ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್​, ವಿವಿಧ ಸಂಟನೆಗಳ ಮುಖಂಡರಾದ ಕೆ.ಬಿ.ಗೋನಾಳ, ಎಸ್​.ಎ. ಗಫಾರ್​, ಮುದುಕಪ್ಪ ಹೊಸ ಮನಿ, ಸುಂಕಪ್ಪ ಮೀಸಿ, ರಮೇಶ್​ ಸಾಲ್ಮನಿ, ಬಂದೆ ನವಾಝ ಮನಿಯಾರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net