ಹಾಸ್ಟೆಲ್​ಗೆ ಸೌಲಭ್ಯ ಕಲ್ಪಿಸಿ

district koppal ambedaka hostel students sfi
Published on

ಕೊಪ್ಪಳ: ತಾಲೂಕಿನ ದದೇಗಲ್​ ಅಂಬೇಡ್ಕರ್​ ಬಾಲಕರ ವಸತಿ ನಿಲಯಕ್ಕೆ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಎಸ್​ಎ್​ಐ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಸಹಾಯಕ ನಿರ್ದೇಶಕ ಶರಣಪ್ಪಗೆ ಮನವಿ ಸಲ್ಲಿಸಿದರು.

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದಾರೆ. ಗ್ರಂಥಾಲಯ, ಬೆಡ್​ ಇಲ್ಲ. ಸೋಲಾರ್​ ವ್ಯವಸ್ಥೆ ಇಲ್ಲ. ರಾತ್ರಿ ವಿದ್ಯುತ್​ ಹೋದರೆ ಯುಪಿಎಸ್​ ವ್ಯವಸ್ಥೆ ಇಲ್ಲ. ಕತ್ತಲಲ್ಲಿ ಹಾವು, ಚೇಳು ಬರುತ್ತಿವೆ. ಆವರಣದಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆ ಹೆಚ್ಚಿ ರೋಗ ಭೀತಿ ಶುರುವಾಗಿದೆ. ದಿಪತ್ರಿಕೆ, ಸ್ಟಡಿ ಚೇರ್​, ಚಪ್ಪಲ್​ ಸ್ಟಾ$ಂಡ್​ಗಳಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಅವಲೊತ್ತುಕೊಂಡರು.

ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡಿ. ಉತ್ತಮ ಪರಿಸರ ನಿರ್ಮಿಸಿ. ಇಲ್ಲದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಎಸ್​ಎ್​ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ವಿದ್ಯಾರ್ಥಿಗಳಾದ ಯಮನೂರ, ನಾಗರಾಜ್​, ಅಮರೇಶ, ಭೀಮೇಶ, ಮೌನೇಶ, ದೇವರಾಜ, ಯಮನೂರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net