ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಿ

district koppal alavandi village tb awarness programme
Published on

ಕೊಪ್ಪಳ: ಕ್ಷಯರೋಗ ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು ಶ್ವಾಸಕೋಶ ಕ್ಷಯರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ಹನಿಗಳ ಮುಖಾಂತರ ಕ್ಷಯರೋಗ ಹರಾಡುತ್ತದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ಅಳವಂಡಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಮೂರ್ಲನಾ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ ವತಿಯಿಂದ ಕ್ಷಯರೋಗ ನಿಮೂರ್ಲನ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಕ್ಷಯರೋಗ ಮೈಕೋ ಬ್ಯಾಕ್ತಿರಿಯಂ ಟ್ಯೂಬರ ಕ್ಯೂಲಾಸಿಸ್​ ಸೂಕ್ಷ್ಮ ರೋಗಾಣು ಮೂಲಕ ತೀವ್ರಗತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ, ಉಸಿರಾಟದ ಮುಖಾಂತರ ಮಾನವನ ದೇಹ ಸೇರಿಕೊಂಡು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೊಂಕಾಗಿ ಪರಿಣಾಮಿಸಿ, ರೋಗವಾಗಿ ಹೊರಹೊಮ್ಮುತ್ತದೆ. ನಿಕ್ಷಯ್​ ಪೋಫಿಣ್​ ಯೋಜನೆ ಅಡಿಯಲ್ಲಿ ಧ್ರಡಪಟ್ಟ ಎಲ್ಲಾ ಕ್ಷಯರೋಗಿಗಳಿಗೆ ತಿಂಗಳಿಗೆ 1000 ರೂ ಡಿಬಿಟಿ ಮುಖಾಂತರ ಅವರ ಖಾತೆಗೆ ಕಳಿಸಲಾಗುವುದು. ದುಶ್ಚಟಗಳನ್ನು ತೊರೆದು ಅರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಮತ್ತು ನಮ್ಮಲ್ಲಿಯೇ ಇರುವ ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸಬೇಕು, ಎಲ್ಲರೂ ಕ್ಷಯಮುಕ್ತ ಜಿಲ್ಲೆ, ಕ್ಷಯಮುಕ್ತ ರಾಜ್ಯ. ಕ್ಷಯಮುಕ್ತ ಭಾರತ ಮಾಡುವಲ್ಲಿ ಶ್ರಮಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಓ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ,ಚಂದ್ರಶೇಖರ ಮೇಟಿ, ಎಸ್​ ಟಿಎಸ್​ ಮಹಮ್ಮದ್​ ಇಬ್ರಾಹಿಮ, ಲ್ಯಾಬ್​ ಟೇಕ್ನಿಸಿಯನ್​ ನಾಗರಾಜ, ಎಸ್​ ವಿವೈಎಮ್​ ರಾಘವೇಂದ್ರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net