

ಕೊಪ್ಪಳ: ವಿಕಲಚೇತನರು ಸರ್ಕಾರದ ಸೇವಾ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕಾರ್ಗಿಲ್ ಮಲ್ಲಯ್ಯ ಅಂಗವಿಕಲ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂಡಿ ತಿಳಿಸಿದರು.
ಅಳವಂಡಿ ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಮ ಪಂಚಾಯತ್ ಅಳವಂಡಿ ವತಿಯಿಂದ ನಡೆದ ವಿಕಲಚೇತನರ ವಿಶೇಫಿ ಸಮನ್ವಯ ಗ್ರಾಮ ಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ವಿಕಲಚೇತನರ ಸಾಧನ ಸಲಕರಣೆ ವಿತರಣೆ, ಲ್ಯಾಪ್ಟಾಪ್ ವಿತರಣೆ, ದೃಷ್ಟಿ ದೋಫಿವಿಕಲಚೇತನರಿಗೆ ಶಿಶು ಪಾಲನೆ ಭತ್ತೆ, ಬ್ರೈನ್ ಕಿಟ್ ಯೋಜನೆ, ಶ್ರವಣ ನ್ಯೂನತೆ ಉಳ್ಳವರಿಗೆ ಹೊಲಿಗೆ ಯಂತ್ರ ವಿತರಣೆ, ಆಧಾರ್ ಯೋಜನೆ, ಸಾಧನೆ ಯೋಜನೆ, ಪ್ರತಿಭಾ ಯೋಜನೆ, ಶುಲ್ಕ ಮರುಪಾವತಿ, ವಿಕಲಚೇತನ ಶಿಫ್ಯಿವೇತನ, ಯಂತ್ರ ಚಾಲಿತ ವಾಹನ ವಿತರಣೆ ಹಾಗೂ ವಿವಿಧ ಇಲಾಖೆಗಳ 5 ಶೇಕಡ ಮೀಸಲಾತಿ ಅನುದಾನದಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಬಹುದು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ವೃತ್ತಿ ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದು ಕೆಲಸವನ್ನು ಹೊಂದಬಹುದು ವಿಕಲಚೇತನರು ಕೇಳಿರಿಮೆಯಿಂದ ಹೊರ ಬಂದು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶಂಕ್ರಮ್ಮ ಜೋಗೀನ, ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಪರಶುರಾಮ, ತೋಟಯ್ಯ ಅರಳೇಲಿಮಠ, ಕಾರ್ಗಿಲ್ ಮಲ್ಲಯ್ಯ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಚೆನ್ನಮ್ಮ ಗಾಳಿ, ಕಾಯಕ ಮಿತ್ರ ಗೀತಾ ಕಿಲ್ಲೆದ, ವಿಕಲಚೇತನರಾದ ಶೇಕಪ್ಪ ಶೆಟ್ಟರ, ಹನುಮಂತಪ್ಪ ಎಲ್ಲಿಗಾರ, ವೆಂಕಪ್ಪ ತಳವಾರ, ಗೀತಾ, ಕ್ಯಾಂಡರು, ಬಸವರಾಜ, ಹನುಮರಡ್ಡಿ, ಶ್ರೀದೇವಿ, ಯಂಕಪ್ಪ ಇತರರು ಇದ್ದರು.