

ಕೊಪ್ಪಳ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಇದೇ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಜು.27ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸೋಮನಗೌಡ ಪಾಟೀಲ್ ತಿಳಿಸಿದರು.
ಮಹಾಸಭಾ ರಚನೆಯಾಗಿ 120 ವರ್ಷಗಳಾಗಿವೆ. ಈ ಮೊದಲು ಸಂಟನೆ ಚುರುಕುಗೊಂಡಿರಲಿಲ್ಲ. ಇತ್ತೀಚೆಗೆ ಸಂಟನೆ ಬಲವಾಗುತ್ತಿದೆ. ಇದೇ ಮೊದಲ ಬಾರಿಗೆ ಜಿಲ್ಲಾ ಹಾಗೂ ಕೊಪ್ಪಳ, ಗಂಗಾವತಿ, ಕುಷ್ಟಗಿ ತಾಲೂಕು ಟಕಗಳಿಗೆ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಹಂತದಲ್ಲಿ ಜಿಲ್ಲಾಧ್ಯಕ್ಷ, 10 ಮಹಿಳೆ ಹಾಗೂ 20 ಪುರುಷ ಸದಸ್ಯರಿಗೆ ಚುನಾವಣೆ ನಡೆಯಲಿದೆ. ತಾಲೂಕು ಹಂತದಲ್ಲಿ ತಾಲೂಕು ಅಧ್ಯಕ್ಷ, 7 ಮಹಿಳೆ, 13 ಪುರುಷ ಸದಸ್ಯರ ಆಯ್ಕೆಗೆ ಚುನಾವಣೆ ಇರಲಿದೆ. ಜಿಲ್ಲೆಯಲ್ಲಿ 1,118 ಮತದಾರರಿದ್ದಾರೆ. ಕೊಪ್ಪಳ ತಾಲೂಕಿನ 769 ಮತದಾರರಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
250ರೂ. ಕೊಟ್ಟು ಸದಸ್ಯರಾದವರು ತಾಲೂಕು ಮಟ್ಟದ ಚುಣಾವಣೆಗೆ ಸ್ಪರ್ಧಿಸಲು ಹಾಗೂ ಮತದಾನ ಹಕ್ಕು ಹೊಂದಿದ್ದಾರೆ. 1 ಸಾವಿರ ರೂ. ಕೊಟ್ಟು ಸದಸ್ಯರಾದವರು ರಾಜ್ಯಮಟ್ಟದಲ್ಲಿ, 5 ಸಾವಿರ ರೂ. ಕೊಟ್ಟು ಸದಸ್ಯರಾದವರು ರಾಷ್ಟ್ರಮಟ್ಟದ ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಮತದಾನ ಹಕ್ಕು ಹೊಂದಿರುತ್ತಾರೆ. ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆ ಹತ್ತಿರದ ಬನಶ್ರೀ ಕೃಪಾ, ಕ್ಲಬ್ ರಸ್ತೆಯಲ್ಲಿ ಚುನಾವಣಾ ಕಚೇರಿ ತೆರೆಯಲಾಗಿದೆ. ಜೂ.27ರಿಂದ ಜುಲೈ 4ವರೆಗೆ ನಿತ್ಯ ಬೆಳಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದು. ಜುಲೈ 5ರಂದು ನಾಮಪತ್ರ ಪರಿಶೀಲನೆ, 8ರಂದು ಹಿಂಪಡೆಯಲು ಕೊನೆ ದಿನ ಇರಲಿದೆ. ಚುನಾವಣೆ ಅಗತ್ಯವಿದ್ದಲ್ಲಿ ಜುಲೈ 21ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಸಲಾಗುವುದು. ಮುಕ್ತಾಯ ಬಳಿಕ ಮತ ಎಣಿಕೆ ಇರಲಿದೆ ಎಂದರು.
ಸಹಾಯಕ ಚುನಾವಣಾಧಿಕಾರಿಗಳಾದ ಶಿವಾನಂದಪ್ಪ ಬಣಕಾರ, ಶರಣಪ್ಪ ಬಳಿಗಾರ, ಎಸ್.ಬಿ. ಸಂತೋಜಿ, ಶರಣಪ್ಪ ಅರಕೇರಿ, ಬಸವರಾಜ ಅಂಗಡಿ ಇದ್ದರು.