ಗಗನ ಕುಸುಮವಾಗುವುದೇ ಗಗನಯಾನ ?

airport in koppal land quotation MLA Raghavendra Hitnal
Published on
  • ನಡೆಯದ ಭೂಸ್ವಾಧಿನ ಪ್ರಕ್ರಿಯೆ
  • 40 ಕೋಟಿ ರೂ. ಅನ್ಯ ಕಾರ್ಯಗಳಿಗೆ ಬಳಕೆ

ವಿಜಯವಾಣಿ ವಿಶೇಷ ಕೊಪ್ಪಳ


ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬುದು ಬಹುವರ್ಷಗಳ ಕನಸು. ಈ ನಿಟ್ಟಿನಲ್ಲಿ ಹಲವು ಹೋರಾಟದ ಲವಾಗಿ ಕಳೆದ ಬಿಜೆಪಿ ಸರ್ಕಾರದ ಕೊನೇ ಬಜೆಟ್​ನಲ್ಲಿ ಭೂಸ್ವಾಧಿನಕ್ಕೆಂದು 40 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯದ ಕಾರಣ ಅನುದಾನ ಅನ್ಯ ಕಾಮಗಾರಿಗೆ ಖರ್ಚು ಮಾಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರಿಗೆ ಸಂಪರ್ಕ ಅಭಿವೃದ್ಧಿ ದೃಷ್ಟಿಯಿಂದ ಉಡಾನ್​ ಯೋಜನೆ ಪರಿಚಯಿಸಿದೆ. ಯೋಜನೆಯಡಿ ರಾಜ್ಯ ರಾಜ್ಯಗಳ ನಡುವೆ ವೈಮಾನಿಕ ಸೇವೆ ಆರಂಭಿಸಲು ಪ್ರೋತ್ಸಾಹ ನೀಡಿದೆ. ಇದೇ ಯೋಜನೆಯಡಿ 20198ರಲ್ಲಿ ಕೊಪ್ಪಳದಿಂದ ಗೋವಾ, ಹೈದ್ರಾಬಾದ್​ ಹಾಗೂ ಬೆಂಗಳೂರಿಗೆ ವಿಮಾನ ಸೇವೆ ಆರಂಭಿಸಲು ಮುಂದಾಗಿತ್ತು. ಖಾಸಗಿ ಇಂಡಿಗೋ ಕಂಪನಿಯೂ ಮುಂದೆ ಬಂದಿತ್ತು. ಕೊಪ್ಪಳದ ಬಸಾಪುರದಲ್ಲಿ ಖಾಸಗಿ ವಿಮಾನ ನಿಲ್ದಾಣವಿದ್ದು, ಒಪ್ಪಂದ ಮಾಡಿಕೊಂಡು ಅಲ್ಲಿಂದಲೇ ವೈಮಾನಿಕ ಕಾರ್ಯಚಟುವಟಿಕೆ ನಡೆಸಲು ಯೋಜಿಸಲಾಗಿತ್ತು.

ಆದರೆ, ಖಾಸಗಿ ಕಂಪನಿ ವಿಮಾನ ನಿಲ್ದಾಣ ಸಾರ್ವಜನಿಕ ಬಳಕೆ ನೀಡಲು ಒಪ್ಪಲಿಲ್ಲ. ಅಲ್ಲದೇ ರನ್​ ವೇ ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟು, ಅದಕ್ಕೆ ಅನುದಾನ ನೀಡುವಂತೆ ತಿಳಿಸಿ ಪತ್ರ ಬರೆದಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದು, ವಿಮಾನ ಸೇವೆ ಆರಂಭಕ್ಕೆ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಪರಿಣಾಮ ಹೋರಾಟಗಳು ಹುಟ್ಟಿಕೊಂಡವು. ಹೋರಾಟಗಾರರು, ಖಾಸಗಿ ಕಂಪನಿಯವರ ನಡುವೆ ಹಲವು ಸಭೆಗಳು ನಡೆದರೂ ಲಪ್ರದವಾಗಲಿಲ್ಲ. ಬಳಿಕ ಸರ್ಕಾರವೇ ವಿಮಾನ ನಿಲ್ದಾಣ ನಿರ್ಮಿಸಲು ಆಸಕ್ತಿವಹಿಸಿದೆ. ಇದಕ್ಕಾಗಿ ಜಾಗ ಹುಡುಕಾಟ ಕಾರ್ಯವೂ ನಡೆದು ಎರಡು ಜಾಗಗಳನ್ನು ಅಂತಿಮಗೊಳಿಸಲಾಗಿದೆ.

ಅಂತಿಮವಾಗಿ ಕುಷ್ಟಗಿ ರಸ್ತೆಯ ತಾಳ ಕನಕಾಪುರ ಸೀಮಾದಲ್ಲಿ 200 ಎಕರೆಗೂ ಅಧಿಕ ಭೂಮಿ ಗುರುತಿಸಲಾಗಿದೆ. ಕೇಂದ್ರ ವಿಮಾನ ಯಾನ ಅಧಿಕಾರಿಗಳು, ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಲು ಹಲವು ಸುತ್ತಿನ ಸಮೀೆ ನಡೆಸಿ ವರದಿ ಸಲ್ಲಿಕೆ ಮಾಡಿವೆ. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ತಮ್ಮ ಕೊನೇ ಬಜೆಟ್​ನಲ್ಲಿ ಕೊಪ್ಪಳ ವಿಮಾನ ನಿಲ್ದಾಣ ಭೂಸ್ವಾಧಿನ ಪ್ರಕ್ರಿಯೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 40 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಬಳಿಕ ಚುನಾವಣೆ ಬಂದ ಕಾರಣ ಪ್ರಗತಿ ಕಂಡಿರಲಿಲ್ಲ. ಇದೀಗ ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳ ಅನ್ಯ ಕಾಮಗಾರಿಗೆ ಅನುದಾನ ಬಳಕೆ ಮಾಡುವಂತೆ ತಿಳಿಸಿದ್ದರೆನ್ನಲಾಗಿದೆ.

ಇನ್ನು ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್​ ಸೇರಿದ್ದಾರೆ. ಅವರೂ ತಮ್ಮ ಅಧಿಕಾರವಧಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಈಗಲೂ ಚುನಾಯಿತರಾದವರಿಗೆ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಾರ್ವಜನಿಕ ಸಭೆಗಳಲ್ಲಿ ಮನವಿ ಮಾಡುತ್ತಾರೆ. ಇದೆಲ್ಲದರ ನಡುವೆ ಅನುದಾನ ಅನ್ಯ ಕಾಮಗಾರಿಗೆ ಬಳಸಲು ಶಾಸಕರು ಮುಂದಾಗಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ವಿಮಾನ ನಿಲ್ದಾಣ ಆರಂಭ ಕನಸು ಇನ್ನಷ್ಟು ವಿಳಂಬವಾಗಲಿದೆ ಎಂಬುದು ವಿಪಕ್ಷ ಹಾಗೂ ಸಾರ್ವಜನಿಕರ ಅಳಲು.

ಪ್ರಯತ್ನಗಳು ನಡೆಯಲಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳು, ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿವೆ. ಅಕ್ಕ&ಪಕ್ಕದ ಜಿಲ್ಲೆಗಳಿಗೆ ಕೊಪ್ಪಳ ಕೇಂದ್ರಬಿಂದುವಾಗಿದೆ. ಹೀಗಾಗಿ ಇಲ್ಲಿ ವಿಮಾನ ನಿಲ್ದಾಣವಾದಲ್ಲಿ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ. ಸದ್ಯ ದಿನ ಕಳೆದಂತೆ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಸರ್ಕಾರ ಭೂಸ್ವಾಧಿನ ಪ್ರಕ್ರಿಯೆ ಆರಂಭಿಸುವ ಲಕ್ಷಣಗಳು ಕಾಣುತ್ತಿಲ್ಲ. ಈಗಿರುವ ಅನುದಾನ ವಾಪಸ್​ ಪಡೆದಲ್ಲಿ ಮುಂದೆ ಅನುದಾನ ಮೀಸಲಿಡುವ ಭರವಸೆಯೂ ಸದ್ಯದ ಪರಿಸ್ಥಿತಿಯಲ್ಲಿಲ್ಲ.

ವಿಮಾನ ನಿಲ್ದಾಣಕ್ಕೆ ಅನುದಾನ ಕಾಯ್ದರಿಸಿದರೂ ಬಳಕೆ ಮಾಡಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಮಾನ ನಿಲ್ದಾಣ ಆರಂಭಕ್ಕೆ ಬೇಕಾದ ಅನುಮತಿ ಹಾಗೂ ಇತರ ನಿಯಾಮಳಿ ಪೂರ್ಣಗೊಳಿಸಿದಲ್ಲಿ 100 ಕೋಟಿ ರೂ. ಅನುದಾನ ಬೇಕಾದರೂ ನೀಡುವುದಾಗಿ ಕೆಕೆಆರ್​ಡಿಬಿ ತಿಳಿಸಿದೆ. ಹೀಗಾಗಿ ಈಗಿರುವ ಅನುದಾನ ಸುಮ್ಮನೆ ಕಾಯ್ದಿರಿಸುವ ಬದಲು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ. -ರಾಘವೇಂದ್ರಹಿಟ್ನಾಳ. ಕೊಪ್ಪಳ ಶಾಸಕ.

-ರಾಘವೇಂದ್ರಹಿಟ್ನಾಳ. ಕೊಪ್ಪಳ ಶಾಸಕ.

ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಅನುದಾನ ಅನ್ಯ ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಶಾಸಕರು ಪತ್ರ ಬರೆದ ಬಗ್ಗೆ ಗೊತ್ತಿಲ್ಲ. ಆದರೆ, ಅಭಿವೃದ್ಧಿ ನಿಟ್ಟಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಅವಶ್ಯವಿದೆ. ಚುನಾಯಿತ ಪ್ರತಿನಿಧಿಗಳು ಅದಕ್ಕೆ ಆದ್ಯತೆ ನೀಡಬೇಕು. ನಾನು ಮನವಿ ಮಾಡುವೆ. -ಸಂಗಣ್ಣ ಕರಡಿ. ಮಾಜಿ ಸಂಸದ ಕೊಪ್ಪಳ.

-ಸಂಗಣ್ಣ ಕರಡಿ. ಮಾಜಿ ಸಂಸದ ಕೊಪ್ಪಳ.

ವಿಮಾನ ನಿಲ್ದಾಣ ಭೂಸ್ವಾಧಿನಕ್ಕೆಂದು ಇಟ್ಟ ಅನುದಾನ ಅನ್ಯ ಕಾಮಗಾರಿಗೆ ಬಳಕೆ ಮಾಡಲು ಶಾಸಕರು ತಿಳಿಸಿದ್ದಾರೆಂಬ ಮಾಹಿತಿ ಇದೆ. ಈಗಿರುವ ಹಣ ವರ್ಗಾಯಿಸುವುದು ಸರಿಯಲ್ಲ. ಅನುದಾನ ಬಳಕೆ ಮಾಡಿದಲ್ಲಿ ಮುಂದೆ ತರುವುದು ಕಷ್ಟ. ಭೂಸ್ವಾಧಿನಕ್ಕೆ ಪ್ರತ್ಯೇಕ ಅನುದಾನ ತರುವ ಕೆಲಸವಾಗುತ್ತಿಲ್ಲ. ದಿನಗಳು ಕಳೆದಂತೆ ಭೂಮಿ ಬೆಲೆ ಹೆಚ್ಚಾಗಲಿದೆ. ಜಿಲ್ಲೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. -ಆರ್​.ಬಿ.ಪಾನಘಂಟಿ. ವಿಮಾನ ನಿಲ್ದಾಣ ಹೋರಾಟ ಸಮಿತಿ ಪ್ರಮುಖ.

-ಆರ್​.ಬಿ.ಪಾನಘಂಟಿ. ವಿಮಾನ ನಿಲ್ದಾಣ ಹೋರಾಟ ಸಮಿತಿ ಪ್ರಮುಖ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net