

ಕೊಪ್ಪಳ: ದೇಶ ಇಂದು ವ್ಯಕ್ತಿ ಆರಾಧನೆಯಲ್ಲಿ ತೊಡಗಿದೆ. ವ್ಯಕ್ತಿಗಿಂತ ವಿಚಾರ ಮುಖ್ಯ ಎಂಬುದು ನಾವೆಲ್ಲ ಸಾರಬೇಕಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಎಐಡಿವೈಒದಿಂದ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ರಾಜ್ಯ ಎಂಬುದು ಹೆಸರಿಗೆ ಸೀಮಿತವಾಗಿದೆ. ಜನರ ಬದಲು ಶ್ರೀಮಂತರ ಕಲ್ಯಾಣವಾಗುತ್ತಿದೆ. ದೇಶಕ್ಕೆ ಸ್ವಾತಂತ್ರ$್ಯ ಬಂದು ಇಷ್ಟು ವರ್ಷಗಳಾದರೂ ಪ್ರಜಾಪ್ರಭುತ್ವದ ಆಶಯಗಳು ಈಡೇರಿಲ್ಲ. ಜಾತಿ, ಧರ್ಮ, ಜನಾಂಗೀಯ ಗಲಭೆ ನಡೆಯುತ್ತಿವೆ. ಮಣಿಪುರ ಟನೆ ಇದಕ್ಕೆ ಉದಾಹರಣೆ. ಇಂಥ ಸಮಸ್ಯೆಗಳ ವಿರುದ್ಧ ಯುವಕರು ಹೋರಾಡಬೇಕು. ಮಹಾನ್ ವ್ಯಕ್ತಿಗಳ ವಿಚಾರ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಕ್ಲಿಷ್ಟಕರ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಸಮಾಜದಲ್ಲಿ ಟನೆ ನೆನೆದರೆ ನೋವಾಗುತ್ತದೆ. ಮಹಿಳೆಯರ ಮೇಲೆ ಅತ್ಯಾಚಾರ, ಪ್ರೀತಿ ನಿರಾಕರಿಸಿದರೆ ಕೊಲೆ ಮಾಡುವುದು ಸಭ್ಯ ಸಮಾಜದ ಲಕ್ಷಣವಲ್ಲ. ಹುಟ್ಟುತ್ತಲೇ ಯಾರೂ ಅಪರಾಧಿಗಳಲ್ಲ. ಸಮಾಜದಲ್ಲಿನ ಆಗು ಹೋಗುಗಳ ಪರಿಣಾಮ ಇಂಥ ಟನೆ ನಡೆಯುತ್ತವೆ. ಈ ಬಗ್ಗೆ ಯುವ ಜನರು ಗಂಭೀರವಾಗಿ ಚಿಂತಿಸಬೇಕೆಂದರು.
ಧಾರವಾಡ ಜನ ಜಾಗೃತಿ ಅಭಿಯಾನ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಪ್ರಪಂಚದಲ್ಲಿ ಮುಂದಿನ 10 ವರ್ಷಗಳಲ್ಲಿ 102 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಅವರಲ್ಲಿ 42 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. 60 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಅಸಮಾನತೆಯಿಂದ ಯುವಕರು ಕುಗ್ಗುತ್ತಾರೆ. ಅಪರಾಧ ಚಟುವಟಿಕೆಗಳಿಗೆ ಪ್ರೇರಣೆಯಾಗಲಿದೆ. ಲೈಂಗಿಕ ಅಪರಾಧಗಳಿಗೂ ಸಿಲುಕುತ್ತಾರೆ. ಅಂಥ ವಿಷ ವರ್ತುಲದಿಂದ ಯುವ ಸಮೂಹ ಹೊರಬರಬೇಕೆಂದರು.
ಮಾನಸಿಕ ತಜ್ಞ ಬಿ.ವಿ.ನಾಗರಾಳ ಯುವ ಮನಸ್ಸುಗಳ ತಲ್ಲಣ ವಿಷಯ ಕುರಿತು ಉಪನ್ಯಾಸ ನೀಡಿದರು. ಎಐಡಿವೈಒ ಪದಾಧಿಕಾರಿಗಳಾದ ಶರಣು ಪಾಟೀಲ್, ಶರಣು ಗಡ್ಡಿ, ದೇವರಾಜ ಹೊಸಮನಿ, ಸುಭಾನ್, ಮೌನೇಶ, ಕಾರ್ತಿಕ್, ಸುರೇಶ, ಮಲ್ಲಮ್ಮ, ಮಹಾಲಕ್ಷಿ$್ಮ ಹಾಗೂ ಇತರರಿದ್ದರು.