ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಪ್ರತಿಭಟನೆ

district koppal aidso students protest guest lectuers
Published on

ಕೊಪ್ಪಳ: ಪದವಿ ತರಗತಿಗಳು ಆರಂಭವಾಗಿದ್ದು, ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಒತ್ತಾಯಿಸಿ ಎಐಡಿಎಸ್​ಒ ಸಂಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದಿದೆ. ಈವರೆಗೂ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ. ರಾಜ್ಯದ ಎಲ್ಲ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ಆಗಿವೆ. ಈವರೆಗೂ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಸಂಕಷ್ಟ ಎದುರಾಗಿದೆ. ನಮಗೆಲ್ಲ ಮುಂದೇನು ಎಂಬ ಆತಂಕ ಎದುರಾಗಿದೆ. ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಯುಜಿಸಿ ಹೊಸ ನಿಯಮಾವಳಿ ಹಾಗೂ ಅತಿಥಿ ಉಪನ್ಯಾಸಕರ ನೇಮಕ ಕುರಿತು ಕೋರ್ಟ್​ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಅದನ್ನೇ ನೆಪ ಮಾಡಿ ಸರ್ಕಾರ ಕೈ ಕಟ್ಟಿ ಕುಳಿತರೆ ನಮ್ಮ ಪಾಡೇನು ಎಂದು ಅಳಲು ತೋಡಿಕೊಂಡರು.

ಶೈಕ್ಷಣಿಕ ವಿಷಯಗಳಲ್ಲಿ ರಾಜ್ಯ ಸರ್ಕಾರ ಕೇಂದ್ರದ ನಿರ್ಧಾರ ಪಾಲಿಸುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಸುಮ್ಮನಿದೆ. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಪೂರಕವಾಗಿ ಸ್ಪಷ್ಟ ನಿಲುವು ತಾಳಬೇಕು. ತಕ್ಷಣ ತುರ್ತು ಕ್ರಮ ಕೈಗೊಂಡು ಉಪನ್ಯಾಸಕರನ್ನು ನೇಮಿಸಬೇಕು. ಮುಂದಿನ ತಿಂಗಳು ಮೊದಲ ಆಂತರಿಕ ಪರೀೆ ಎದುರಾಗಲಿದೆ. ಅಷ್ಟರಲ್ಲಿ ನೇಮಕಾತಿ ನಡೆಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಐಡಿಎಸ್​ಒ ಸಂಚಾಲಕರಾದ ಪ್ರದಿಪ್​, ಶರಣಪ್ಪ, ಅಪ್ಪಾಜಿ, ತಿರುಪತಿ, ವಿದ್ಯಾರ್ಥಿಗಳಾದ ರುಕ್ಸನಾ ಬೇಗಂ, ಸಾವಿತ್ರಿ, ತುಳಸಿ, ಆಕಾಶ್​, ಹುಲಿಗಮ್ಮ, ಲಕ್ಷಿ$್ಮ, ನೇತ್ರಾ, ದರ್ಶನ್​, ಮಲ್ಲಪ್ಪ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net