ಎನ್​ಟಿಎ ರದ್ದು ಪಡಿಸಿ: ಎಐಡಿಎಸ್​ಒ

AIDSO organisation protest NTA cancel koppal
ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ರದ್ಧತಿಗೆ ಆಗ್ರಹಿಸಿ ಎಐಡಿಎಸ್​ಒ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಗಂಗರಾಜ ಅಳ್ಳಳ್ಳಿ, ಪ್ರದಿಪ್​, ವೆಂಕಟೇಶ, ಕೋಟೇಶ, ಶ್ರೀಧರ, ಮೇರಾಜ, ಮಂಜುನಾಥ, ಪ್ರದಿಪ ಪಿ. ಇದ್ದರು.
Published on

ಕೊಪ್ಪಳ: ಪರೀಕ್ಷೆ ಅಕ್ರಮಗಳು ಹೆಚ್ಚಿದ್ದು ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಎಐಡಿಎಸ್​ಒ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟ ಆಡಲಾಗುತ್ತಿದೆ. ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಇದರ ಬೆನ್ನಲ್ಲೇ ಎನ್​ಟಿಎ ನಡೆಸಿದ ಎನ್​ಇಟಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಪರೀೆ ರದ್ದುಡಪಡಿಸಲಾಗಿದೆ. ಎರಡೂ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೇಳಿ ಬಂದಿದೆ. ಲಾಂತರ ವಿದ್ಯಾರ್ಥಿಗಳು ವರ್ಷಾನುಗಟ್ಟಲೇ ಪರೀಕ್ಷೆಗೆ ತಯಾರಿ ನಡೆಸಿರುತ್ತಾರೆ. ಆದರೆ, ಪರೀಕ್ಷೆ ಅವ್ಯವಹಾರಗಳನ್ನು ಸಂಬಂಧಿಸಿದ ಸಂಸ್ಥೆಗಳು ಚಿಕ್ಕದೆಂದು ಬಿಂಬಿಸುತ್ತಿವೆ. ಪರೀಕ್ಷೆ ನಡೆದ ಮರುದಿನವೇ ರದ್ದುಗೊಳಿಸಿ ಸಿಬಿಐ ತನಿಖೆ ನೀಡಿದ್ದು, ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ಪರೀಕ್ಷೆ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ವೇಗವಾಗಿ ಆಗಬೇಕು. ನ್ಯಾಯಾಂಗ ತನಿಖೆಗೆ ನೀಡಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕು. ಎನ್​ಟಿಎ ರದ್ದುಗೊಳಿಸಬೇಕು. ರಾಜ್ಯಮಟ್ಟದಲ್ಲಿಯೇ ನೀಟ್​, ಎನ್​ಇಟಿ ಪರೀಕ್ಷೆಗಳನ್ನು ನಡೆಸಬೇಕು. ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಕೌನ್ಸಲಿಂಗ್​ ಮುಂದೂಡಬೇಕು. ಪ್ರಬಲ ಕೋಚಿಂಗ್​ ಸಂಸ್ಥೆಗಳ ಮೇಲೆ ನಿಗಾವಹಿಸಬೇಕು. ನಿಬಂಧನೆಗಳು ವಿಧಿಸಬೇಕು. ಎನ್​ಇಟಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ಯುಜಿಸಿಯಿಂದಲೇ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಕಾರರಾದ ಗಂಗರಾಜ ಅಳ್ಳಳ್ಳಿ, ಪ್ರದಿಪ್​, ವೆಂಕಟೇಶ, ಕೋಟೇಶ, ಶ್ರೀಧರ, ಮೇರಾಜ, ಮಂಜುನಾಥ, ಪ್ರದಿಪ ಪಿ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net