

ಕೊಪ್ಪಳ: ಎಐಡಿಎಸ್ಒ ದೇಶದ ದೊಡ್ಡ ವಿದ್ಯಾರ್ಥಿ ಸಂಘಟನೆ. ಇಂದು ಸಂಸ್ಥಾಪನಾ ದಿನವಾಗಿದ್ದು, ಸಂಟನೆ ಬಲಪಡಿಸಿ ಹೋರಾಡಬೇಕಿದೆ ಎಂದು ಸಂಟನೆ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಹೇಳಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಐಡಿಎಸ್ಒ 70ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
ನವೋದಯ ಚಿಂತಕರಾದ ವಿದ್ಯಾಸಾಗರ್, ಸಾವಿತ್ರಿ ಬಾಯಿ ಪುಲೆ, ಜ್ಯೋತಿಬಾ ಪುಲೆ, ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ನೇತಾಜಿ ಸೇರಿ ಅನೇಕರ ವಿಚಾರಧಾರೆ ಇಟ್ಟುಕೊಂಡು ಸಂಟನೆ ಹುಟ್ಟಿದೆ. 1954ರಲ್ಲಿ ಬಂಗಾಳದಲ್ಲಿ ಸ್ಥಾಪನೆಯಾಗಿದ್ದು, ಇಂದು 30ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದೆ. ದೇಶದ ಎಲ್ಲರಿಗೂ ಉನ್ನತ ಶಿಕ್ಷಣವೂ ಉಚಿತವಾಗಿ ಸಿಗಬೇಕು ಎಂಬುದು ಕ್ರಾಂತಿಕಾರಿಗಳ ವಿಚಾರಧಾರೆ ಎಂದರು.
ಅದನ್ನು ವಿದ್ಯಾರ್ಥಿಗಳಾದ ನಾವೆಲ್ಲ ನನಸು ಮಾಡಬೇಕಿದೆ. ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಸ್ಥಾಪನಾ ದಿನದಂದು ನಾವು ಆ ನಿರ್ಧಾರ ಮಾಡೋಣ. ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗೋಣ ಎಂದು ತಿಳಿಸಿದರು.
ಎಐಡಿಎಸ್ಒ ಕಾರ್ಯಕರ್ತರಾದ ಸದಾಶಿವ, ಬಾಬು, ಚನ್ನವಿರ, ತಿಪ್ಪೇಶ, ಭೀಮೇಶ, ಹನುಮೇಶ, ಅಮರೇಶ, ಕನಕನಗೌಡ ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿದ್ದರು.