

ಕೊಪ್ಪಳ: ಕಾಲೇಜಿನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಭವಿಷ್ಯ ಬೋಧಕರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ತಂತ್ರಜ್ಞಾನಕ್ಕೆ ತಕ್ಕಂತೆ ಜ್ಞಾನ ವೃದ್ಧಿಸಿಕೊಂಡು ಜವಾಬ್ದಾರಿ ಅರಿಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಕಲಬುರ್ಗಿ ಜಂಟಿ ನಿರ್ದೇಶಕ ಪ್ರೊ.ಗೊಳ್ಳೆ ಶಿವಶರಣ ಬಿ. ಹೇಳೀದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಉದ್ಯೋಗ ಕೌಶಲ ತರಬೇತಿ ಕಾರ್ಯಾಗರ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅರಿವು ಇರಬೇಕು. ಬೋಧಕರು, ಯುವ ಬೋಧಕರು ತಂತ್ರಜ್ಞಾನದ ಬಳಕೆ ಕಲಿಯಬೇಕು. ಸದ್ಯ ಸರ್ಕಾರಿ ಕಾಲೇಜುಗಳ ಅಸ್ತಿತ್ವ ಉಳಿಸುವ ಪ್ರಶ್ನೆ ಎದುರಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ನಮ್ಮಲ್ಲೂ ತಂತ್ರಜ್ಞಾನ ಆಧಾರಿತ ಬೋಧನಾ ಕ್ರಮಕ್ಕೆ ಆದ್ಯತೆ ನೀಡಿ. ನಮ್ಮ ಮಕ್ಕಳು ಪ್ರತಿಭಾವಂತರಿದ್ದು, ಉತ್ತಮ ಬೋಧನೆ ಮೂಲಕ ಅವರ ಭವಿಷ್ಯ ರೂಪಿಸಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ, ಕೃತಕ ಬುದ್ಧಿಮತ್ತೆ, ಪರಿಕಲ್ಪನೆ, ಉಗಮ, ವಿಕಾಸ ಹಾಗೂ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು. ಸಹಾಯಕ ನಿರ್ದೇಶಕ ರಾಜೇಂದ್ರ ಶಿಂಧೆ, ವಿಶೇಷ ಅಧಿಕಾರಿಗಳಾದ ಡಾ.ಬಿ.ಸರೋಜಾ, ಡಾ.ಸೂರ್ಯಕಾಂತ ಉಮ್ಮಾಪುರೆ, ವಾಧ್ವಾನಿ ಫೌಂಡೇಶನ್ಮಾಸ್ಟರ್ ಟೆನರ್ ಕು.ಸ್ವಾತಿ ಪುತ್ರನ್ ವಿವಿಧ ವಿಷಯಗಳ ಮಾಹಿತಿ ಹಂಚಿಕೊಂಡರು.
ಕಾಲೇಜು ಸಿಬ್ಬಂದಿ ಸಂತೋಷಿಕುಮಾರಿ, ಶಿವಬಸಪ್ಪ ಮಸ್ಕಿ, ಗೋಣಿಬಸಪ್ಪ, ಮಹಮ್ಮದ್ ಶಫಿ, ಬಸವರಾಜ ಕರುಗಲ್, ಶಿವರಾಮ್, ಸ್ಥಾನಿಕರಣ ಕೋಶ ವಿಭಾಗ ಸಂಚಾಲಕ ಶಿವನಾಥ್, ಡಾ.ಸಿ.ಬಿ.ಚಿಲ್ಕರಾಗಿ, ತಳಬಾಳ ವಸತಿ ಪದವಿ ಕಾಲೇಜಿನ ಪ್ರಾಚಾರ್ಯ ಯಮನೂರಪ್ಪ, ಮಹಾಂತೇಶ ಮೈನಳ್ಳಿ, ರವಿಕಿರಣ್, ಡಾ.ಭಾಗ್ಯಜ್ಯೋತಿ ಇತರರಿದ್ದರು.
ಕೊಪ್ಪಳದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಕೌಶಲ ತರಬೇತಿ ಕಾರ್ಯಾಗಾರವನ್ನು ಾಲೇಜು ಶಿಕ್ಷಣ ಇಲಾಖೆ ಕಲಬುರ್ಗಿ ಜಂಟಿ ನಿರ್ದೇಶಕ ಪ್ರೊ.ಗೊಳ್ಳೆ ಶಿವಶರಣ ಬಿ. ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ, ವಿಶೇಷ ಅಧಿಕಾರಿಗಳಾದ ಡಾ.ಬಿ.ಸರೋಜಾ, ಡಾ.ಸೂರ್ಯಕಾಂತ ಉಮ್ಮಾಪುರೆ, ವಾಧ್ವಾನಿ ಫೌಂಡೇಶನ್ಮಾಸ್ಟರ್ ಟೆನರ್ ಕು.ಸ್ವಾತಿ ಪುತ್ರನ್ ಇದ್ದರು.