ಕೊಪ್ಪಳ: ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೃಷಿಕ ಸಮಾಜಕ್ಕೆ ಐದು ವರ್ಷದ ಅವಧಿಗೆ ಬುಧವಾರ ಚುನಾವಣೆ ನಡೆಯಿತು. ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಕುಷ್ಟಗಿ ತಾಲೂಕು ಗುಮಗೇರಾದ ಶೇಖರಗೌಡ ಮಾಲಿಪಾಟೀಲ(ಅಧ್ಯಕ್ಷ), ಕನಕಗಿರಿಯ ಸಂಗಪ್ಪ ಹಂಪಣ್ಣ (ಉಪಾಧ್ಯಕ್ಷ), ಕಾರಟಗಿ ತಾಲೂಕು ಬೆನ್ನೂರಿನ ಎಂ.ಚಂದ್ರಶೇಖರಗೌಡ (ಪ್ರಧಾನ ಕಾರ್ಯದರ್ಶಿ) ಗಂಗಾವತಿ ತಾಲೂಕು ಹೇರೂರು ಗ್ರಾಮದ ಅಮರೇಶಪ್ಪ ಗೋನಾಳ (ಖಜಾಂಚಿ), ತಳಕಲ್ನ ಶಿವಪ್ಪ ಗೂಳರಡ್ಡಿ (ರಾಜ್ಯ ಪ್ರತಿನಿಧಿ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ತಿಳಿಸಿದ್ದಾರೆ.