ಕೃಷಿ ತಂತ್ರಜ್ಞಾನದ ಅರಿವು ಅವಶ್ಯ, ಡಾ.ಪಿ.ಎಲ್​.ಪಾಟೀಲ್​ ಅಭಿಮತ

district koppal agreeculture training programme
Published on

ಕೊಪ್ಪಳ: ಕೃಷಿ ಪರಿಕರ ಮಾರಾಟಗಳಲ್ಲಿ ನಿತ್ಯ ಹಲವು ತಾಂತ್ರಿಕತೆಗಳು ಬರುತ್ತಿವೆ. ಅವುಗಳನ್ನು ಹೇಗೆ ಬಳಸಬೇಕು ಎಂಬ ಜ್ಞಾನ ತಿಳಿದುಕೊಂಡು ಅದನ್ನ ರೈತರಿಗೆ ತಲುಪಿಸಬೇಕೆಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್​.ಪಾಟೀಲ ಹೇಳಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮಾ ಪದವಿ ತರಗತಿ ಆರಂಭ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮಾರಾಟಗಾರರು ನಿಮಗೆ ನೀಡುವ 48 ವಾರಗಳ ತರಬೇತಿಯಲ್ಲಿ ಶಿಸ್ತು, ಸಂಯಮದಿಂದ ಕಲಿಯಿರಿ. ವೈಜ್ಞಾನಿಕ ಕೃಷಿ ಕಾಲ. ಕೇವಲ ಪರಿಕರ ಮಾರಾಟ ಮಾಡಿದರೆ ಸಾಲದು. ಅವುಗಳ ಬಗ್ಗೆ ಸಮಗ್ರ ಜ್ಞಾನ ಅರಿಯಬೇಕು. ಎಲ್ಲ ಪ್ರದೇಶದಲ್ಲಿ ಹವಾಮಾನ ಒಂದೇ ಇರದು. ಸುತ್ತಲಿನ ಪರಿಸರ, ಜೀವ ವೈವಿಧ್ಯದ ಜ್ಞಾನ ಹೊಂದಿರಬೇಕು. ನಿಮ್ಮ ಮಕ್ಕಳಿಗೆ ಜೀವ ವಿಜ್ಞಾನದ ಮಾಹಿತಿ ನೀಡಿ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಉದ್ಯಮವಾಗಲಿದೆ. ಸೋಲಾರ್​ ಬಳಕೆ, ಮಣ್ಣು&ನೀರು ಪರೀೆ, ರಕ್ಷಣೆಗೆ ಆದ್ಯತೆ ನೀಡುವಂತೆ ತಿಳಿಸುವಂತೆ ಹೇಳಿದರು.

ಧಾರವಾಡ ಸಮೇತಿ -ಉತ್ತರ ಕೃಷಿ ವಿವಿ ಪ್ರಾಧ್ಯಾಪಕ ಡಾ.ಎಸ್​.ಎನ್​. ಜಾಧವ್​ ಮಾತನಾಡಿ, 48 ವಾರಗಳ ತರಬೇತಿಯಲ್ಲಿ ಮೂರು ಪರೀೆ ನಡೆಸಲಾಗುವುದು. ಚೆನ್ನಾಗಿ ಮಾಹಿತಿ ಪಡೆಯಿರಿ. ತರಬೇತಿ ಬಳಿಕ ಪ್ರಮಾಣ ಪತ್ರ ನೀಡಲಾಗುವುದು. ಅದರಿಂದ ಕೃಷಿಪರಿಕರ ಮಾರಾಟಕ್ಕೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಮೇಳ 2025ರ ಕರಪತ್ರ ಬಿಡುಗಡೆ ಮಾಡಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಡಾ.ಎಂ.ವಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ವೀರಣ್ಣ ಕಮತರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net