ಸಿರಿಧಾನ್ಯ ಪಾಕ ಉತ್ತೇಜಿಸಿ, ಸಿಇಒ ರಾಹುಲ್​ ರತ್ನಂ ಪಾಂಡೆಯ ಸಲಹೆ

district koppal agreeculture millate mela zp ceo rahul
Published on

ಕೊಪ್ಪಳ: ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಪಾಕಕ್ಕೆ ಉತ್ತೇಜನ ನೀಡುವಂತೆ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸಲಹೆ ನೀಡಿದರು.

ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಕೃಷಿ ಇಲಾಕೆಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯ ಪಾಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿರಿಧಾನ್ಯ ಬಳಕೆಯಿಂದ ಆರೋಗ್ಯ ವೃದ್ಧಿಯಾಗಲಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಸಿರಿಧಾನ್ಯ ಖಾದ್ಯ ಪೂರೈಕೆಗೆ ಕ್ರಮವಹಿಸಿ. ಅಂಗನವಾಡಿ ಮೆನುಗಳಲ್ಲಿ ಅವುಗಳನ್ನು ಸೇರಿಸಿ ಪ್ರೋತ್ಸಾಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿ, ಸಿರಿಧಾನ್ಯಗಳ ಬ್ರಾಂಡಿಂಗ್​, ಸಂಸ್ಕರಣೆಯನ್ನು ಎ್​ಪಿಒಗಳ ಮೂಲಕ ಪ್ರೋತ್ಸಾಹಿಸಲಾಗುವುದೆಂದರು.

ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ 50 ಮಹಿಳೆಯರು ಸ್ಪರ್ಧೆಯಲ್ಲಿ ಭಾಗಿಯಾದರು. ಹಾರಕ, ನವಣೆ, ಸಜ್ಜೆ, ರಾಗಿ, ಹುರುಳಿ, ಸಾಮೆ, ಬರಗು, ಕುಸುಬೆ, ಅಗಸೆ ಹಾಗೂ ಇತರ ಧಾನ್ಯಗಳಿಂದ 106ಕ್ಕೂ ಹೆಚ್ಚು ಖಾದ್ಯ ಪ್ರದರ್ಶಿಸಿದರು. ಬಗೆ ಬಗೆ ಸಿಹಿ ತಿನಿಸು, ರೊಟ್ಟಿ, ದೋಸೆ, ವಡಾ, ಇಡ್ಲಿ, ಬಿಸಿ ಬೇಳೆಬಾತ್​ ಹಾಗೂ ಇತರ ಆಹಾರಗಳನ್ನು ಮಾಡಿದ್ದರು. ಜನರು ಎಲ್ಲ ಪದಾರ್ಥಗಳ ರುಚಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ವಿಜ್ಞಾನಿಗಳಾದ ಡಾ.ಕವಿತಾ, ಡಾ.ರಾಧಾ, ಡಾ.ರೇವತಿ, ಡಾ.ರಾವೇಂದ್ರ ಎಲಿಗಾರ ತೀರ್ಪುಗಾರರಾಗಿ ಭಾಗವಹಿಸಿ ಎಲ್ಲ ಖಾದ್ಯಗಳನ್ನು ವೀಸಿದರು. ಖಾರ ವಿಭಾಗದ ಅಡುಗೆಯಲ್ಲಿ ಕೊಪ್ಪಳದ ಸುಖಿರಾಣಿ (ಪ್ರಥಮ), ಸಹನಾ ಮೇವುಂಡಿ (ದ್ವೀತಿಯ), ಹುಲಿಗೆಮ್ಮ ಕಾಂಬಳೆ (ತೃತೀಯ) ಸ್ಥಾನ ಪಡೆದರು. ಸಿಹಿ ವಿಭಾಗದಲ್ಲಿ ಸೌಮ್ಯಾ ಪಾಟೀಲ್​ (ಪ್ರಥಮ), ಕೊಟ್ರಮ್ಮ ಹಿಡಿಕಿಮಠ (ದ್ವೀತಿಯ), ಜಯಶ್ರೀ ಸಸಿಮಠ (ತೃತೀಯ) ಸ್ಥಾನ ಪಡೆದುಕೊಂಡರು.

ಮರೆತು ಹೋದ ಪಾಕ ಸ್ಪರ್ಧೆಯಲ್ಲಿ ಸುಮಂಗಲಾ ಬಂಡಿ (ಪ್ರಥಮ), ವಿಜಯ ಲಕ್ಷಿ$್ಮ ಮುದಗಲ್​ (ದ್ವೀತಿಯ) ಹಾಗೂ ಶಿವಲೀಲಾ ಹುರಕಡ್ಲಿ (ತೃತೀಯ) ಪ್ರಶಸ್ತಿ ಪಡೆದುಕೊಂಡರು. ಉಪ ಕೃಷಿ ನಿರ್ದೇಶಕ ಸಿದ್ದೇಶ ಎಲ್​., ಡಾ.ಕವಿತಾ ಉಳ್ಳಿಕಾಶಿ, ಸಹಾಯಕ ನಿರ್ದೇಶಕರಾದ ಜೀವನಸಾಬ್​, ಅಜ್ಮೀರ ಅಲಿ, ಸಿಬ್ಬಂದಿ ಎಂ.ಎಂ.ಹಸನ್​, ಮಹಮ್ಮದ್​ ಗೇಸುದರಾಜ, ಪ್ರಕಾಶ ಚವಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net