ಕೊಪ್ಪಳಕ್ಕೆ ಕೃಪೆ ತೋರದ ವರುಣ, ಕಳೆದೊಂದು ತಿಂಗಳಲ್ಲಿ ಶೇ.42ರಷ್ಟು ಮಳೆ ಕೊರತೆ

district koppal agreeculture department rain affect
Published on

ಕೊಪ್ಪಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸಿದರೆ, ಜಿಲ್ಲೆಯಲ್ಲಿ ನಿರೀತ ಮಳೆಯಾಗುತ್ತಿಲ್ಲ. ಬಿತ್ತನೆಗೂ ಹಿನ್ನಡೆಯಾಗುತ್ತಿದ್ದು, ಬೆಳೆ ಕಳೆದುಕೊಳ್ಳುವ ಆತಂಕ ದಿನ ಕಳೆದಂತೆ ಹೆಚ್ಚುತ್ತಿದೆ.

ಮುಂಗಾರು ಆರಂಭ ಆಶಾದಾಯಕವಾಗಿದ್ದರೂ ಜೂನ್​ ಮಾಹೆಯಲ್ಲಿ ವಾಡಿಕೆಯಷ್ಟೂ ಮಳೆ ಆಗಿಲ್ಲ. ಜಿಲ್ಲೆಯಲ್ಲಿ 3.64ಲಕ್ಷ ಹೆಕ್ಟೇರ್​ ಕ್ಷೇತ್ರ ಬಿತ್ತನೆ ಗುರಿ ಇದ್ದು, ಈವರೆಗೆ 2.17ಲಕ್ಷ ಹೆಕ್ಟೇರ್​ (ಶೇ.60) ಬಿತ್ತನೆಯಾಗಿದೆ. ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಅಲಸಂದಿ, ಶೇಂಗಾ, ಹತ್ತಿ ಪ್ರಮುಖವಾಗಿ ಬಿತ್ತನೆಯಾಗಿದೆ. ನಿರೀೆಯಂತೆ ಬಿತ್ತನೆ ನಡೆದರೂ ಮಳೆ ಬರುತ್ತಿಲ್ಲ. ಮೋಡ ಕಟ್ಟಿಕೊಂಡರೂ ಗಾಳಿ ನಿರಂತರ ಬೀಸುತ್ತಿದೆ. ಮಳೆ ವಾತಾವರಣ ಇದ್ದರೂ ವರುಣ ಕೃಪೆ ತೋರುತ್ತಿಲ್ಲ. ತಕ್ಷಣ ಮಳೆಯಾಗದಿದ್ದರೆ ಬರ ಛಾಯೆ ಆವರಿಸಲಿದೆ. ಇಂದಿನಿಂದ (ಜು.3) ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ಬಂದರೆ ಬೆಳೆ ಉಳಿಯಲಿದೆ. ಇಲ್ಲದಿದ್ದರೆ ಬರದ ಕರಿ ನೆರಳು ಜಿಲ್ಲೆ ಮೇಲೆ ಆವರಿಸುವುದು. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ವಿಜಯನಗರ ಹೊರತುಡಪಡಿಸಿ ಬಾಕಿ ಜಿಲ್ಲೆಗಳಲ್ಲಿ ನಿರೀತ ಮಳೆಯಾಗದಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಅಲ್ಲಲ್ಲಿ ಚದುರಿದ ಮಳೆ ಆಗುತ್ತಿದ್ದರೂ ಬೆಳೆಗೆ ಅವಶ್ಯವಿರುವಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ. ಜೂನ್​ ತಿಂಗಳಲ್ಲಿ 78.6ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ವಾಸ್ತವವಾಗಿ 45.8 ಮಿ.ಮೀ. ಆಗಿದೆ. ಶೇ.42ರಷ್ಟು ಮಳೆ ಕೊರತೆಯಾಗಿದೆ. ಕುಕನೂರು ತಾಲೂಕಿನಲ್ಲಿ 88.4ಮಿ.ಮೀ. ವಾಡಿಕೆ ಪೈಕಿ ಕೇವಲ 1704ಮಿ.ಮೀ. ಆಗಿದೆ. ಶೇ.80ರಷ್ಟು ಮಳೆ ಕೊರತೆಯಾಗಿದ್ದು ಹೆಸರು ಸೇರಿ ಇತರ ಬೆಳೆಗಳು ಬಾಡುವ ಹಂತ ತಲುಪಿವೆ.

ಯಲಬುರ್ಗಾ ತಾಲೂಕಿನಲ್ಲಿ ಶೇ.51ರಷ್ಟು, ಕನಕಗಿರಿ ಶೇ.42, ಕುಷ್ಟಗಿ ಶೇ.37, ಕೊಪ್ಪಳ ಶೇ.33ರಷ್ಟು ಮಳೆ ಕೊರತೆ ಎದುರಿಸುತ್ತಿವೆ. ಇನ್ನು ಕಳೆದೊಂದು ವಾರದಲ್ಲಿ ಜಿಲ್ಲಾದ್ಯಂತ ಶೇ.78ರಷ್ಟು ಮಳೆ ಕೊರತೆ ಆಗಿದ್ದು ಭವಿಷ್ಯದ ದಿನಗಳಲ್ಲಿ ವರುಣ ಕೃಪೆ ತೋರುವನಾ ಇಲ್ಲವೆಂಬ ಅನುಮಾನ ಮೂಡುವಂತೆ ಮಾಡಿದೆ. ಕೆಲವೆಡೆ ರೈತರು ಬಿತ್ತಿದ ಬೆಳೆ ಉಳಿಸಿಕೊಳ್ಳಲು ನೀರಾವರಿ ಸೌಲಭ್ಯ ಇರುವವರಿಂದ ನೀರು ಬಾಡಿಗೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಿತ್ತನೆ ಮಾಡಿದ ಬೆಳೆಗಳು ಸರಿಯಾಗಿ ಮೊಳೆಯಾಗಿಲ್ಲ. 15&520 ದಿನದ ಹಿಂದೆ ನಡೆದ ಬಿತ್ತನೆ ಬೆಳೆಗೆ ಗೊಬ್ಬರ ನೀಡುವ ಅಗತ್ಯವಿದ್ದು ಮಳೆಯಾದರೆ ಮಾತ್ರ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net