

ಕೊಪ್ಪಳ: ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಯುವಕರು ಸ್ವಯಂ ಉದ್ಯೋಗಿಗಳಾಗಬೇಕೆಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದರು.
ತಾಲೂಕಿನ ಬಸಾಪುರ ಬಳಿಯ ಅಣಬೆ ಕೃಷಿ ಟಕ ಮತ್ತು ಮೌಲ್ಯವರ್ಧಿತ ಉತ್ಪನ್ನ ಟಕ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಸರ್ಕಾರ ಅನೆಕ ಯೋಜನೆ ಜಾರಿ ಮಾಡಿದೆ. ತರಬೇತಿ ನೀಡುತ್ತಿದೆ. ಸಾಲ ಯೋಜನೆ ರೂಪಿಸಿದೆ. ಅವುಗಳನ್ನು ಬಳಸಿಕೊಂಡು ಯುವಕರು ಉದ್ಯೋಗಿಗಳಾಗಬೇಕೆಂದು ಕಿವಿಮಾತು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಯೋಜನೆಯಡಿ ಜಿಲ್ಲೆಯಲ್ಲಿ 178ಕ್ಕೂ ಹೆಚ್ಚು ಲಾನುಭವಿಗಳಿದ್ದಾರೆ. ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಯೋಜನೆಯಲ್ಲಿ ತರಬೇತಿ, ಬ್ಯಾಂಕ್ ಸಾಲ, ಯೋಜನಾ ವೆಚ್ಚದ ಶೇ.50ರಷ್ಟು ಸಬ್ಸಿಡಿ ಸಿಗಲಿದೆ. ಆಹಾರ ಸಂಸ್ಕರಣೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಅನುಕೂಲವಾಗಲಿದೆ ಎಂದರು.
ಲಾನುಭವಿ ಭೀಮಪ್ಪ ಕೊರವರ ಮಾತನಾಡಿದರು. ಮೀನುಗಾರಿಕೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ ಶಿವಶೇಖರ ಪಾಟೀಲ್, ಅಯೋಧ್ಯಾ ಕ್ರಾಪ್ಸ್ ಅಕಾಡೆಮಿ ಸಂಸ್ಥಾಪಕ ಎಂ.ಬಿ.ಪಾಟೀಲ್, ಜಿಲ್ಲಾ ಅನುಷ್ಠಾನ ಸಮಿತಿಯ ನಳಿನಿ, ಆತ್ಮ ಯೋಜನೆ ಅಧಿಕಾರಿ ಶಿವಪ್ಪ ನಾಯಕ, ಸಂಪನ್ಮೂಲ ವ್ಯಕ್ತಿ ರಾವೇಂದ್ರ ಗೊಂದಿ ಇತರರಿದ್ದರು.