

ಕೊಪ್ಪಳ: ತಾಲೂಕಿನ ಅಗಳಕೇರಾ ಗ್ರಾಮದ ಸ್ಮಶಾನದಲ್ಲಿ ವಾಮಾಚಾರಿಗಳಂತೆ ಪೂಜೆ ಮಾಡುತ್ತಿದ್ದವನ್ನು ಗ್ರಾಮಸ್ಥರು ಥಳಿಸಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಮಾಚಾರ ಮಾಡಲು ಬಂದಿದ್ದರೆಂದು ಆರೋಪಿಸಿದ್ದಾರೆ. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹುಷಾರಿಲ್ಲದ ಕಾರಣ ಹಾಗೂ ಮಕ್ಕಳಾಗಲೆಂದು ಪೂಜೆ ಸಲ್ಲಿಸಿದ್ದಾಗಿ ತಿಳಿದು ಬಂದಿದೆ.
ಅಗಳಕೇರಾದಲ್ಲಿ ಏ.21(ಸೋಮವಾರ)ರಂದು ನಿವೃತ್ತ ಶಿಕ್ಷಕ ಸಿದ್ದಪ್ಪ ಮಡಿವಾಳರ ಎಂಬುವವರು ತೀರಿಕೊಂಡಿದ್ದಾರೆ. ಮಂಗಳವಾರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಗುರುವಾರ ರಾತ್ರಿ ಹಿಟ್ನಾಳ ಗ್ರಾಮದ ದೇವಿ ಆರಾಧಕನೆಂದು ಗುರುತಿಸಿಕೊಂಡಿರುವ ಸರಮಸ್ ಅಲಿ ಹಾಗೂ ಹೊಸಪೇಟೆ ತಾಲೂಕಿನ ವ್ಯಾಸನಕೆರೆಯ ನಾಲ್ವರು ಸ್ಮಶಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಸಿದ್ದಪ್ಪ ಮಡಿವಾಳ ಸಮಾಧಿ ಮುಂದೆ ಪೂಜೆ ಸಲ್ಲಿಸಿ, ಕುಂಕುಮ, ಅಕ್ಕಿ, ಅವಲಕ್ಕಿ ಇನ್ನಿತರ ದಿನಿಸು ಇರಿಸಿದ್ದಾರೆ. ಅಲ್ಲದೇ ಸಮಾಧಿ ಮೇಲೆ ಮೂವರ ೋಟೋ ಇಟ್ಟಿದ್ದಾರೆ. ಅರೆ ಬೆತ್ತಲಾಗಿ ಪೂಜೆ ನೆರವೇರಿಸಿದ್ದಾರೆ.
ಇದನ್ನು ಕಂಡು ಹೆದರಿದ ಗ್ರಾಮಸ್ಥರು ಎಲ್ಲರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಮುನಿರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಮಸ್ ಅಲಿ, ವ್ಯಾಸನಕೆರೆ ರೈಲ್ವೇ ಸ್ಟೇಷನ್ ನಿವಾಸಿಗಳಾದ ಶ್ರೀನಿವಾಸ ವ್ಯಾಸ, ನಾಗರಾಜ ವ್ಯಾಸ, ಶ್ರೀಧರ ವ್ಯಾಸ ಪೊಲೀಸರ ಅತಿಥಿಗಳಾಗಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಮಕ್ಕಳಾಗುವ ಸಂಬಂಧ ಹಾಗೂ ಅನಾರೋಗ್ಯ ಹಿನ್ನೆಯಲ್ಲಿ ಪೂಜೆ ಸಲ್ಲಿಸಿರುವುದಾಗಿ ಬಾಯಿಬಿಟ್ಟಿದ್ದಾರೆನ್ನಲಾಗಿದೆ. ಆದರೆ, ಇಂಥ ವಿಲಕ್ಷಣ ಟನೆ ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ತಮ್ಮೂರಿಗೆ ವಾಮಾಚಾರ ಮಾಡಿದ್ದಾರೆಂದು ಹೆದರುತ್ತಿದ್ದಾರೆ. ಟನೆ ಸಂಬಂಧ ಐವರ ವಿರುದ್ಧ ಮುನಿರಾಬಾದ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.