ವಕೀಲ ವೃತ್ತಿಯಲ್ಲಿ ವಿಶ್ವಾರ್ಹತೆ ಮುಖ್ಯ, ನಿವೃತ್ತ ನ್ಯಾ.ಎಚ್​.ಬಿಲ್ಲಪ್ಪ ಸಲಹೆ

district koppal advocates workshop bar council
Published on

ಕೊಪ್ಪಳ: ವಕೀಲ ವೃತ್ತಿಯಲ್ಲಿ ವಿಶ್ವಾರ್ಹತೆ ಮುಖ್ಯ. ನ್ಯಾಯವಾದಿಗಳು ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಹೈಕೋರ್ಟ್​ ನಿವೃತ್ತ ನ್ಯಾಯಾಧೀಶ ಎಚ್​.ಬಿಲ್ಲಪ್ಪ ಸಲಹೆ ನೀಡಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಜಿಲ್ಲಾ ವಕೀಲರ ಸಂದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ದೂರುದಾರ ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ವಿಭಿನ್ನವಾಗಿ ಸಾ ಹೇಳುವ ಪ್ರಸಂಗ ಬರುತ್ತವೆ. ಇದರಿಂದ ಪ್ರಕರಣದಲ್ಲಿ ನ್ಯಾಯಾ ಒದಗಿಸಿಕೊಡಲಾಗದು. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ವೃತ್ತಿಪರಗೊಳಿಸಬೇಕು. ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಭಿನ್ನ ಹೇಳಿಕೆ ಇದ್ದಾಗ ಸತ್ಯಾಸತ್ಯತೆ ಅರಿಯಬೇಕು. ಪ್ರಕರಣದ ಆಳಕ್ಕಿಳಿದು ಹೆಚ್ಚಿನ ವಿಷಯ ಹೊರತೆಗೆದಾಗ ಪರಿಣಾಮಕಾರಿಯಾಗಿ ವಾದ ಮಂಡಿಸಬಹುದು. ಅಂತಿಮ ತೀರ್ಪು ನೀಡುವಾಗ ಯಾವ ಸಾಕ್ಷಿಯನ್ನು ನಂಬಬೇಕು, ನಂಬಬಾರದು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದರು.

ನ್ಯಾಯಾಧೀಶರಾದ ಕುಮಾರ ಡಿ.ಕೆ., ಸರಸ್ವತಿ ದೇವಿ, ತ್ರಿವೇಣಿ ಈರಗಾರ, ಮಹಾಂತೇಶ ದರಗದ, ರಾಜ್ಯ ವಕೀಲರ ಪರಿಷತ್​ ಅಧ್ಯಕ್ಷ ಎನ್​.ಎಸ್​.ಮಿಠ್ಠಲಕೋಡ್​, ಸದಸ್ಯರಾದ ಆಸೀಫ್​ ಅಲಿ, ಎಸ್​.ಹರೀಶ್​, ಮಾಜಿ ಸದಸ್ಯೆ ಸಂಧ್ಯಾ ಬಿ. ಮಾದಿನೂರು, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಜಿಲ್ಲಾ ಉಪಾಧ್ಯಕ್ಷ ಬಿ ವಿ ಸಜ್ಜನ್​, ಪ್ರ.ಕಾ.ಪ್ರಕಾಶ ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ.ಕವಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net