

ಕೊಪ್ಪಳ: ವಕೀಲರು ವಿಭಿನ್ನ ಪ್ರಕರಣಗಳನ್ನು ಸವಾಲುಗಳಾಗಿ ಸ್ವೀಕರಿಸಿ. ನಾವು, ನೀವು ನ್ಯಾಯಾಂಗ ವ್ಯವಸ್ಥೆ ಆಧಾರ ಎಂದು ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಡಿ.ಕೆ. ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ವಕೀಲರ ಸಂದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಪುಟ್ಟ ಪ್ರಕರಣಗಳನ್ನು ನಿಮ್ಮ ಹಂತದಲ್ಲಿಯೇ ಪರಿಹರಿಸಿ. ಇದರಿಂದ ಶಾಂತಿ, ಸೌಹಾರ್ದತೆ ಕಾಪಾಡಬಹುದು. ವಕೀಲ ವೃತ್ತಿ ಶ್ರೇಷ್ಠ. ವಕೀಲರು ಮಾತ್ರ ನ್ಯಾಯಾಧೀಶರಾಗಬಹದು. ನ್ಯಾಯ ಅರಸಿ ಬಂದವರಿಗೆ ಆಸರೆಯಾಗಿ ಎಂದು ಕಿವಿಮಾತು ಹೇಳಿದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ವಕೀಲರಿಂದ ಅಭಿವೃದ್ಧಿ ಸಾಧ್ಯ. ಆಯಾ ಗ್ರಾಮದಲ್ಲಿ ಸ್ಥಳಿಯವಾಗಿಯೇ ಸಮಸ್ಯೆ ಪರಿಹರಿಸಿ. ಇದರಿಂದ ಗ್ರಾಮ ಮಟ್ಟದಲ್ಲಿ ಸೌಹಾರ್ದತೆ ಕಾಪಾಡಬಹದು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ. ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಶ್ರೀವೇ ಪೂರ್ಣಗೊಳ್ಳಲಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸರ್ಕಾರ ವಕೀಲರ ನಿಧಿ ಘೋಷಿಸಲಿ. ವಕೀಲ ವೃತ್ತಿ ಪವಿತ್ರವಾಗಿದ್ದು, ನೀವೆಲ್ಲ ನತೆ ಎತ್ತಿಹಿಡಿಯಿರಿ. ವಿವಾಹ ವಿಚ್ಛೇಧನ ಪ್ರಕರಣಗಳಲ್ಲಿ ಸಾಧ್ಯವಾದಷ್ಟು ಹೊಂದಾಣಿಕೆಗೆ ಯತ್ನಿಸಿ ಎಂದರು.
ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ವಕೀಲರು ದೇಶದ ನಿರ್ಮಾತೃಗಳು. ವಕೀಲರ ಅಕಾಡೆಮಿ ಆರಂಭ ಚಿಂತನೆ ಇದೆ. ಅದನ್ನು ಕೊಪ್ಪಳದಲ್ಲಿಯೇ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರ, ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್. ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ. ಕವಲೂರ, ಖಜಾಂಚಿ ರಾಜಾಸಾಬ್ ಬುದಗುಂಪಾ ಇತರರಿದ್ದರು.