ದಯಾನಂದ ಅಮಾನತು ಸರಿಯಲ್ಲ

district koppal adgp b.dayananda suspention valmikhi coomunity memorandum
Published on

ಕೊಪ್ಪಳ: ಬೆಂಗಳೂರು ನಗರ ಕಮಿಷನರ್​ ಬಿ.ದಯಾನಂದ ಅಮಾನತು ಖಂಡಿಸಿ ಅಖಿಲ ಭಾರತ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಎಡಿಸಿ ಸಿದ್ರಾಮೇಶ್ವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಆರ್​ಸಿಬಿ ವಿಜಯೋತ್ಸವ ಆಚರಣೆಯಲ್ಲಿ 11 ಜನ ಸತ್ತಿದ್ದು ದುರ್ಟನೆ ಸಂಭವಿಸಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಟನೆ ನಡೆದಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸರ್ಕಾರ ಪೊಲೀಸ್​ ಕಮಿಷನರ್​ ಬಿ.ದಯಾನಂದ ಅವರ ತಲೆದಂಡ ಮಾಡಿದೆ. ಯಾವುದೇ ತಪು$್ಪ ಮಾಡದಿದ್ದರೂ ಅಮಾನತುಗೊಳಿಸಿದ್ದು ಸಮುದಾಯಕ್ಕೆ ನೋವುಂಟು ಮಾಡಿದೆ. ದಯಾನಂದ ಅವರು ತಮ್ಮ ವೃತ್ತಿ ಜೀವನದಲ್ಲಿ ಈವರೆಗೆ ಒಂದೂ ಕಪು$್ಪಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ಸರ್ಕಾರ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಯಾವುದೇ ಮುಂಜಾಗ್ರತೆ ಕೈಗೊಳ್ಳದ ಕಾರಣ ಕಾಲ್ತುಳಿವಾಗಿ ಜನರು ಮೃತಪಟ್ಟಿದ್ದಾರೆಂದು ಆರೋಪಿಸಿದರು.

ತಕ್ಷಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಮಾನತು ಆದೇಶ ಹಿಂಪಡೆಯಬೇಕು. ನಿಷ್ಠಾವಂತ ಅಧಿಕಾರಿಗೆ ಆದ ಅಗೌರವ ಸರಿಪಡಿಸಬೇಕು. ಇಲ್ಲದಿದ್ದರೆ ಸಮುದಾಯ ಜನರು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಹಸಭಾ ಪ್ರಮುಖರಾದ ಸುರೇಶ ಡೊಣ್ಣಿ, ಶರಣಪ್ಪ ನಾಯಕ, ಯಮನೂರಪ್ಪ ನಾಯಕ, ಶಾಂತಪ್ಪ ಪೂಜಾರ, ವೀರಭದ್ರಪ್ಪ ವಕೀಲ, ವೆಂಕಟೇಶ ಪೂಜಾರ, ಶೇಖರ ಗಿಣಿಗೇರಾ, ಮಾರುತಿ ವಾಲ್ಮೀಕಿ, ಮಹೇಶ ತೊಂಡಿಹಾಳ, ಮಂಜು ಬೆಳವನಾಳ ಇರತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net