ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಜಾಲ ಬಗೆದಷ್ಟು ವಿಸ್ತಾರವಾಗುತ್ತಿದೆ. ಜಿಲ್ಲಾಡಳಿತ ನೇಮಿಸಿದ ಸಮಿತಿ 15ದಿನದಲ್ಲಿ ಆರು ಪ್ರಕರಣಗಳನ್ನು ದಾಖಲಿಸಿರುವುದು ಇದಕ್ಕೆ ಸಾಯಾಗಿದೆ.
ಗಂಗಾವತಿಯಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡುವಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಕೊಪ್ಪಳ ತಾಲೂಕಿನ ಕೂಕನಪಳ್ಳಿಯಲ್ಲಿ ಪಡಿತರ ಅಕ್ಕಿ ತುಂಬಿಕೊಂಡಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಹಾರ ನಿರೀಕ್ಷಕ ರವಿಚಂದ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆದರೆ, ಲಾರಿಯಲ್ಲಿ 11 ಟನ್ ಅಕ್ಕಿ ಇದೆ ಎಂದು ಹೇಳಲಾಗಿತ್ತು. ತೂಕ ಹಾಕಿದಾಗ 35 ಟನ್ ಅಕ್ಕಿ ಇರುವುದು ಪತ್ತೆಯಾಗಿದೆ. ಅಷ್ಟೊಂದು ಪ್ರಮಾಣದ ಅಕ್ಕಿ ಇದ್ದರೂ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಅಕ್ಕಿ ವಶಕ್ಕೆ ಪಡೆದ ಜಿಲ್ಲಾಡಳಿತ ಲಾರಿ ಪೊಲೀಸರ ವಶಕ್ಕೆ ನೀಡಿದೆ.
ಇನ್ನು ಅಳವಂಡಿ ಭಾಗದಲ್ಲಿಯೂ ಅಕ್ಕಿ ಮಾರಾಟ ಜಾಲ ವಿಸ್ತರಿಸಿದೆ. ಆಹಾರ ಇಲಾಖೆ ಅಧಿಕಾರಿಗಳು ಆಟೋದಲ್ಲಿ ಹಾಕಿಕೊಂಡು ಹೊರಟಿದ್ದ ಅಕ್ಕಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅಕ್ಕಿ ಅಕ್ರಮಕ್ಕೆ ಸಂಬಂಧಿಸಿದಂತೆ 17 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ ಆರು ಪ್ರಕರಣ ಕೇವಲ 15 ದಿನದಲ್ಲಿ ದಾಖಲಾಗಿರುವುದು ವಿಶೇಷ. ಸಣ್ಣಪುಟ್ಟ ಪ್ರಮಾಣದಲ್ಲಿ ಸಾಗಣೆ ಮಾಡುವವರ ಮೇಲೂ ದಾಳಿಯಾಗಿವೆ. ಆದರೆ, ಅಪಾರ ಪ್ರಮಾಣದಲ್ಲಿ ಸಂಗ್ರಹ ಇರದ ಕಾರಣ ಪ್ರಕರಣ ದಾಖಲಾಗಿಲ್ಲ. ಅನುಮಾನ ಹಾಗೂ ಸಾರ್ವಜನಿಕರಿಂದ ಬರುವ ದೂರು ಆಧರಿಸಿ ದಾಳಿಗಳು ಮುಂದುವರೆದಿದ್ದು ಅಕ್ರಮಕೋರರಿಗೆ ಢವ ಢವ ಶುರುವಾಗಿದೆ.
ನಿರಂತರ ದಾಳಿ, ಪ್ರಕರಣ ದಾಖಲಾದರೂ ಅಕ್ರಮ ಎಸಗುವವರಿಗೆ ಭಯವಿಲ್ಲದಂತಾಗಿದೆ. ಪ್ರಕರಣ ದಾಖಲಾದರೂ ಪ್ರಭಾವಿಗಳ ಬಂಧನವಾಗುತ್ತಿಲ್ಲ. ಕೇವಲ ಒಂದಿಬ್ಬರ ಮೇಲೆ ಪ್ರಕರಣ ದಾಖಲಿಸುವ ಕೆಲಸವಾಗುತ್ತಿದೆ. ಅಕ್ರಮ ನಡೆದಾಗ ಸೂಕ್ತ ಪರಿಶೀಲನೆ, ದಾಖಲಾತಿ ಸಂಗ್ರಹಿಸುವ ಕೆಲಸವಾಗುತ್ತಿಲ್ಲ. ಸಾಾಧಾರಗಳನ್ನು ಒದಗಿಸಲಾಗುತ್ತಿಲ್ಲ. ಪಡಿತರ ಅಕ್ಕಿ ಪ್ರಯೋಗಾಲಯ ವರದಿ ಶುಲ್ಕ, ತೂಕ ಮಾಡಿಸುವ ಶುಲ್ಕ ಇನ್ನಿತರ ಶುಲ್ಕಗಳು ಮರು ಪಾವತಿ ಆಗದ ಕಾರಣ ಅಧಿಕಾರಿಗಳೂ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
ಆರೋಪಿಗಳ ಪರ ಆದೇಶ
ಆಹಾರ ಇಲಾಖೆ ಅಕ್ರಮ ನಡೆದಾಗಲೆಲ್ಲ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ. ಆದರೆ, ಕಳೆದ 5 ವರ್ಷದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಒಂದೂ ಪ್ರಕರಣಗಳಲ್ಲಿ ತೀರ್ಪು ಬಂದಿಲ್ಲ. 2021ರಿಂದ 2024ವರೆಗೆ ಒಟ್ಟು ಆರು ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಎಲ್ಲವೂ ಆರೋಪಿತರ ಪರವಾಗಿ ಬಂದಿವೆ. 2021ರಲ್ಲಿ 23 ಅಕ್ರಮ ನಡೆದಿದ್ದು 20 ಪ್ರಕರಣ ದಾಖಲಾಗಿವೆ. 45 ಜನರನ್ನು ಬಂಧಿಸಲಾಗಿದೆ. 2022ರಲ್ಲಿ 26 ಅಕ್ರಮಗಳಲ್ಲಿ 21 ದೂರು ದಾಖಲಾಗಿದ್ದು 37 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದದಿದ್ದರು. 2023ರಲ್ಲಿ 14 ಟನೆಗಳಲ್ಲಿ 8 ಪ್ರಕರಣ ದಾಖಲಾಗಿದ್ದು, 16 ಜನರನ್ನು ಬಂಧಿಸಲಾಗಿದೆ. 2024ರಲ್ಲಿ 7 ಅಕ್ರಮ ವರದಿಯಾಗಿದ್ದು, 4 ಪ್ರಕರಣ ದಾಖಲಾಗಿವೆ. 14 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.