ಉದ್ಯಮ ಲಾಭದಾಯಕವಾಗಿಸುವುದು ಮುಖ್ಯ

Published on

ಕೊಪ್ಪಳ: ಉದ್ಯಮ ಆರಂಭ ಮಾಡುವಷ್ಟೇ ಮುಖ್ಯವಾದದ್ದು ಅದನ್ನು ಲಾಭದತ್ತ ಕೊಂಡೊಯ್ಯುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಲಹೆ ನೀಡಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಕೈಗಾರಿಕೆ ಇಲಾಖೆಯಿಂದ ಎಂಎಸ್​ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವ ಸಂಬಂಧ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಹುತೇಕರು ಸ್ವಂತ ಉದ್ದಿಮೆ ಆರಂಭಿಸಬೇಕೆಂಬ ಕನಸು ಕಾಣುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಉದ್ಯಮ ಆರಂಭ ಅಷ್ಟು ಸುಲಭವಲ್ಲ. ಲಾಭ ಗಳಿಸುವಿಕೆ, ಹೆಚ್ಚಿಸಿಕೊಳ್ಳುವಿಕೆಯೂ ಸವಾಲಿನ ಕೆಲಸ. ಅದಕ್ಕೆಂದೆ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದ್ದು, ಎಲ್ಲರೂ ಸದುಪಯೋಗ ಪಡೆಯಿರಿ ಎಂದು ತಿಳಿಸಿದರು.

ಜಂಟಿ ಕೈಗಾರಿಕೆ ನಿರ್ದೇಶಕರು ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಬೆಂಗಳೂರಿನ ಟೆಕ್ಸಾಕ್​ ಸಿಇಒ ಸಿದ್ದರಾಜು, ರಿಫಾ ಚೇಂಬರ್​ ಆಫ್​ ಕಾಮರ್ಸ್​ನ ಶಾಹಿದ್​ ತಹಶೀಲ್ದಾರ, ಲೀಡ್​ ಬ್ಯಾಂಕ್​ ಮ್ಯಾನೇಜರ್​ ಮಾರುತಿ, ಕೆಎ್​ಎಸ್ಸಿ ಶಾಖಾ ವ್ಯವಸ್ಥಾಪಕ ಸೋಮೇಶ ಎಂ.ಚಿಕ್ಕಮಠ, ಸಿಡಾಕ್​ ಜಂಟಿ ನಿರ್ದೇಶಕ ಜಿ.ಯು.ಹುಡೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net