ನೌಕರರು ಪಿಎಂ ಸುರಕ್ಷಾ ವಿಮೆ ಮಾಡಿಸಿ

2001-Kpl-Ravi-2
filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 13107200;cct_value: 0;AI_Scene: (-1, -1);aec_lux: 241.0;aec_lux_index: 0;albedo: ;confidence: ;motionLevel: 1;weatherinfo: weather?null, icon:null, weatherInfo:100;temperature: 33;
Published on

ಕೊಪ್ಪಳ: ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಸರ್ಕಾರಿ ನೌಕರರು ಕಡ್ಡಾಯವಾಗಿ ಮಾಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ವಿಮೆ ಬಗ್ಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನಾನು ಹಾಗೂ ನನ್ನ ಕುಟುಂಬದವರಿಗೆ ವಿಮೆ ಮಾಡಿಸಿರುವೆ. ನೀವೆಲ್ಲ ಮಾಡಿಸಿಕೊಳ್ಳಿ. ನಿಮ್ಮ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿ. ಸರ್ಕಾರಿ ನೌಕರರು ಮಾತ್ರವಲ್ಲದೇ ಸಾರ್ವಜನಿಕರು ಪಾಲಿಸಿ ಮಾಡಿಸಿಕೊಳ್ಳಬಹುದು. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಎಲ್ಲ ಜನರಿಗೆ ಅನುಕೂವಾಗಲಿ ಎಂಬ ದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ವಾರ್ಷಿಕ ಕೇವಲ 20 ರೂ. ಕಟ್ಟಿದರೆ 2 ಲಕ್ಷ ರೂಗಳ ದುರ್ಘಟನಾ ವಿಮೆ ಸಿಗಲಿದೆ. 18 ರಿಂದ 70 ವರ್ಷದ ವರೆಗಿನ ಪ್ರಾಯದ ಎಲ್ಲ ಸೇವಿಂಗ್ಸ್​ ಬ್ಯಾಂಕ್​ ಖಾತೆದಾರರು ಪಾಲಿಸಿ ಮಾಡಬಹುದು. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರಿಮಿಯಂ 436 ರೂ. ಕಟ್ಟಿದರೆ 2 ಲಕ್ಷ ರೂ ಜೀವ ವಿಮೆ ಸಿಗುವುದು. 18 ರಿಂದ 50 ವರ್ಷದ ವಯೋಮಾನದ ಸೇವಿಂಗ್​ ಬ್ಯಾಂಕ್​ ಖಾತೆದಾರರು ಪಾಲಿಸಿಗಳನ್ನು ಮಾಡಿಕೊಳ್ಳಬಹುದೆಂದು ತಿಳಿಸಿದರು.

ಲೀಡ್​ ಬ್ಯಾಂಕ್​ ಮ್ಯಾನೇಜರ್​ ವಿರೇಂದ್ರ ಕುಮಾರ್​ ಮಾತನಾಡಿ, ನಮ್ಮನ್ನು ನಂಬಿದವರಿಗಾಗಿ ಪ್ರಿಮಿಯಂ ಕಟ್ಟಿದರೆ ನಮ್ಮ ಸಾವಿನ ನಂತರ ಅವರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾಗಲಿದೆ. ದೇಶದ ಪ್ರತಿಯೊಬ್ಬರೂ ಯೋಜನೆ ಪಡೆಯಬಹುದು. ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಅಕೌಂಟ್​ ಇದ್ದರೆ ಸಾಕು. ತನ್ನಿಂದತಾನೆ ಪ್ರಿಮಿಯಂ ಹಣ ಕಡಿತವಾಗಲಿದೆ. 18 ವರ್ಷ ಮೇಲ್ಪಟ್ಟವರು ಪಾಲಿಸಿ ಮಾಡಿಸಿಕೊಳ್ಳಬಹುದು. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ರಾಜ್ಯದಲ್ಲಿ ಶೇ.22ರಷ್ಟು ಜನರು ಮಾಡಿಸಿಕೊಂಡಿದ್ದು, ನಮ್ಮ ಜಿಲ್ಲೆಯಲ್ಲಿ ಶೇ.23ರಷ್ಟು ಗುರಿ ಸಾಧನೆಯಾಗಿದೆ ಎಂದರು.

ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಡಿಡಿಪಿಯು ಜಗದೀಶ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿದೇಶಕ ನಾಗರಾಜ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net