ಮೌಲ್ಯಗಳಿಗೆ ಬೆಲೆ ಕೊಡೋಣ, ಎಡಿಸಿ ಸಿದ್ರಾಮೇಶ್ವರ ಹೇಳಿಕೆ

district koppal adc siddarameswara
Published on

ಕೊಪ್ಪಳ: ಮೌಲ್ಯಗಳಿಗೆ ಬೆಲೆ ಕೊಡುವ ಮೂಲಕ ವಿಚಿದ್ರಕಾರಿ ಮನಸ್ಥಿತಿಯಿಂದ ನಾವು ದೂರ ಇರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಭಯೋತ್ಪಾದನೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ನಮ್ಮ ಎದುರು ನಡೆವ ಅಹಿತಕರ ಘಟನೆಗಳನ್ನು ನಾವು ನೋಡಿಕೊಂಡು ಸುಮ್ಮನಿರುವುದು ಅಪರಾಧ. ಅವುಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.ಗಾಂಧಿ ಹುಟ್ಟಿದ ನಾಡು ನಮ್ಮದು. ನಾವು ಶಾಂತಿಗೆ ಮೊದಲ ಆದ್ಯತೆ ನೀಡೋಣ. ಪ್ರತಿವರ್ಫಿ ಮೇ 21 ರಂದು ಭಯೋತ್ಪಾದನಾ ವಿರೋಧಿ ದಿನ ಆಚರಿಸಲಾಗುವುದು. ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮೂಡಿಸಬೇಕು. ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆ ಒಡ್ಡುವ ದುಫ್ಟಿ ಶಕ್ತಿಗಳ ವಿರುದ್ದ ಹೋರಾಡಲು ನಾವೆಲ್ಲರೂ ಪಣ ತೊಡೋಣ. ಅಹಿಂಸೆ, ಸಹನೆಗೆ ನಮ್ಮ ದೇಶ ಹೆಸರಾಗಿದೆ. ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆ ಎದುರಿಸಬೇಕಿದೆ. ನಾವೆಲ್ಲರೂ ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆಯಿಂದ ಬಾಳೋಣ ಎಂದರು.

ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net