ಸಮಸ್ಯೆ ಮೆಟ್ಟಿನಿಂತು ಸಾಧಿಸಿ, ಎಡಿಸಿ ಸಿದ್ರಾಮೇಶ್ವರ

district koppal adc siddarameshwar handycap day celebration
Published on

ಕೊಪ್ಪಳ: ಅಡೆತಡೆ ಮೆಟ್ಟಿ ನಿಂತು ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ ಎಂದು ಎಡಿಸಿ ಸಿದ್ರಾಮೇಶ್ವರ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರು ಕ್ರೀಡೆ ಸೇರಿ ಎಲ್ಲ ರಂಗಗಳಲ್ಲಿ ಕ್ರೀಯಾಶೀಲತೆಯಿಂದ ಭಾಗಿಯಾಗಿ. ಸಾಮಾನ್ಯರಲ್ಲಿ ಇಲ್ಲದ ಚೇತನ, ಸಾಮರ್ಥ್ಯ ವಿಶೇಷ ಚೇತನರಲ್ಲಿದೆ. ಎಲ್ಲರ ಜೀವನದಲ್ಲಿ ಅಡೆತಡೆಗಳು, ಮಾನಸಿಕತೆ ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಉದ್ದೇಶವಾಗಿರಲಿ. ನಿಶ್ಚಿತ ಗುರಿಯನ್ನು ಹೊಂದಬೇಕು. ಶ್ರದ್ಧೆ, ನಿರಂತರ ಪ್ರಯತ್ನದಿಂದ ಅಂತಿಮ ಗುರಿ ತಲುಪಬಹುದು ಎಂದರು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದೊಂದು ಸಮ್ಯಸೆ ಇರುತ್ತದೆ. ವಿಶೇಷ ಚೇತನರು ಎದೆಗುಂದದೆ ಸಾಧನೆ ಮಾಡಬೇಕು. ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷ ಚೇತನರು ಸಾಧನೆ ಮಾಡಿದ್ದಾರೆಂದು ತಿಳಿಸಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಮಾಹಾಂತೇಶ ಎಸ್​.ದರಗದ ಮಾತನಾಡಿ, ಅಂಗವಿಕಲರಿಗೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರಿಯಲು ಅವಕಾಶ ನೀಡುವುದು ನಮ್ಮ ಕರ್ತವ್ಯ. ಅಂಗವಿಕಲತೆಯಿಂದ ಅಣಕಿಸುವ ಪದಗಳಿಂದ ಕರೆಯುವುದು ಅಥವಾ ಮಾನಸಿಕವಾಗಿ ಕುಗ್ಗಿಸುವಂತಹ ವರ್ತನೆ ತೋರಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶೇಷ ಚೇತನರನ್ನು ಸನ್ಮಾನಿಸಲಾಯಿತು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಿಒ ಗಂಗಪ್ಪ, ವಿಶೇಷ ಚೇತನರ ಸಂದ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net