ಕಮಲ್​ ಹಾಸನ್​ ಚಿತ್ರ ರ್ನಿಬಂಧಿಸಿ

district koppal actor kamal hasan kannada karave protest
Published on

ಕೊಪ್ಪಳ: ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ನಮ್ಮ ಭಾವನೆಗೆ ಧಕ್ಕೆ ತಂದಿರುವ ನಟ ಕಮಲ್​ ಹಾಸನ್​ ಕನ್ನಡಿಗರ ಕ್ಷಮೆ ಕೇಳಬೇಕು. ಅವರ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡದಂತೆ ಒತ್ತಾಯಿಸಿ ಕರವೇ ಪದಾಧಿಕಾರಿಗಳು ಶುಕ್ರವಾರ ನಗರದ ಬಸ್​ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.

ಭಾಷಾ ಜ್ಞಾನವಿಲ್ಲದೇ ಕಮಲ್​ ಹಾಸನ್​ ಮಾತನಾಡಿದ್ದಾರೆ. ತಮಿಳಿನಿಂದಲೇ ಕನ್ನಡ ಭಾಷೆ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಕನ್ನಡ ಮತ್ತು ಕನ್ನಡಿಗರಿಗೆ ಮಾಡುವ ಅವಮಾನ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಸತಿ ಹೊಂದಿದೆ. ಕಮಲ್​ ಹೇಳಿಕೆಯಿಂದ ಕನ್ನಡಿಗರಿಗೆ ಅವಮಾನವಾಗಿದೆ. ಇದಕ್ಕೆ ಎಲ್ಲರೂ ವಿರೋಧಿಸಿದರೂ ಕ್ಷಮೆ ಕೇಳುವುದಿಲ್ಲವೆಂದು ಉದ್ಧಟತನ ಪ್ರದರ್ಶಿಸಿದ್ದಾರೆ. ಇದು ಕರ್ನಾಟಕಕ್ಕೆ ಮಾಡುವ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿದರು. ಕಮಲ್​ ಹಾಸನ್​ ಪ್ರತಿಕೃತಿ ದಹಿಸಿ ಖಂಡಿಸಿದರು.

ಕೂಡಲೇ ಕಮಲ್​ ಹಾಸನ್​ ಕನ್ನಡಿಗರಿಗೆ ಬೇಷರತ್​ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆ ವಾಪಸ್​ ಪಡೆಯಬೇಕು. ಅಲ್ಲಿವರೆಗೂ ಅವರ ಚಿತ್ರ ಥಗ್​ ಲ್​ೈ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಚಿತ್ರರಂಗ ಸಹ ಈ ನಿಟ್ಟಿನಲ್ಲಿ ದಿಟ್ಟತನ ಪ್ರದರ್ಶಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ, ಪದಾಧಿಕಾರಿಗಳಾದ ಬಸನಗೌಡ ಪಾಟೀಲ, ಹನುಮಂತ ಬೆಸ್ತರ, ನಿಂಗಪ್ಪ ಮೂಗಿನ್​, ಪ್ರಫುಲ್​ಕುಮಾರ ಪಾಟೀಲ, ಪ್ರಕಾಶ ಮನ್ನೇರಾಳ, ರಮೇಶ ಹಾಲವರ್ತಿ, ಚಂದ್ರಶೇಖರ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net