

ಕೊಪ್ಪಳ: ತಾಲೂಕಿನ ಚಿಕ್ಕಬಗನಾಳ ಗ್ರಾಮದ ಸಮೀಪದ ಹುಲಿಗೆಮ್ಮ ದೇವಿ ಡಾಬಾ ಬಳಿ ಬುಧವಾರ ಬೈಕ್ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಗನಾಳ ಗ್ರಾಮದ ಭೀಮೇಶ ಚನ್ನದಾಸರ (19) ಮೃತ. ಯುವಕ ಬೆಳಗ್ಗೆ ಜಮೀನಿಗೆ ಹೋಗಿ ಬರುವಾಗ ಡಾಬಾ ಬಳಿ ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.