ಕಲ್ಯಾಣ ಕರ್ನಾಟಕ ಪ್ರಾಧಿಕಾರ ರಚಿಸಿ, ಹೋರಾಟಗಾರರ ಆಗ್ರಹ

371(J) protest koppal students participate
371(ಜೆ) ಮೀಸಲು ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್​ ಉಸ್ತಾದ್​, ಹೋರಾಟಗಾರರಾದ ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ಬಸವರಾಜ, ಪ್ರಭು ಉಪನಾಳ, ಆರ್​.ಬಿ.ಪಾನಂಟಿ, ಆಸ್​ೀ ಅಲಿ, ವಿ.ಎಂ.ಭೂಸನೂರ ಮಠ ಇದ್ದರು.
Published on

ಕೊಪ್ಪಳ: ಕಲ್ಯಾಣ ಕರ್ನಾಟಕಕ್ಕೆ ಮೀಸಲಾತಿ ಕಲ್ಪಿಸುವ 371(ಜೆ) ಸಮರ್ಪಕ ಅನುಷ್ಠಾನ ಹಾಗೂ ರದ್ಧತಿ ಹೋರಾಟ ವಿರೋಧಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಯುವ ಟಕ ನೇತೃತ್ವದಲ್ಲಿ ವಿವಿಧ ಸಂ, ಸಂಸ್ಥೆಗಳ ಪ್ರತಿನಿಧಿಗಳು, ಸಾವಿರಾರು ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್​ ಉಸ್ತಾದ್​ ಮಾತನಾಡಿ, 371(ಜೆ) ಸಂವಿಧಾನ ನಮಗೆ ನೀಡಿದ ಮೀಸಲಾತಿ. ಯಾವುದೇ ಪಕ್ಷ, ಸರ್ಕಾರ ಕೊಟ್ಟಿದ್ದಲ್ಲ. 10 ವರ್ಷವಾದರೂ ಸಮರ್ಪಕ ಅನುಷ್ಠಾನವಾಗಿಲ್ಲ. ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳ ಜನ ಇದನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಸಂಪುಟ ಉಪ ಸಮಿತಿ ಅಧ್ಯಕ್ಷತೆವಹಿಸಿಕೊಂಡಿದ್ದ ಗೋವಿಂದ ಕಾರಜೋಳ, ಎಚ್​.ಕೆ.ಪಾಟೀಲ್​, ಮಾಧುಸ್ವಾಮಿ, ಬಿ.ಶ್ರೀರಾಮುಲು ತಮಗೆ ಇಷ್ಟಬಂದಂತೆ ಆದೇಶ ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಶಿಕ್ಷಣ, ಉದ್ಯೋಗದ ಪ್ರತಿ ಹಂತದಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಧ್ವನಿ ಎತ್ತದಿದ್ದರೆ ನಮ್ಮ ಮೀಸಲು ಕಳೆದುಕೊಳ್ಳಬೇಕಾಗುತ್ತದೆ. ಇದು ನಮ್ಮ ಹಕ್ಕು. ಕಸಿಯಲು ಬಂದರೆ ನಾವು ಸುಮ್ಮನಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಾಕಷ್ಟು ಹೋರಾಟಗಳ ಲವಾಗಿ ನಮಗೆ 371(ಜೆ) ಮೀಸಲು ಸಿಕ್ಕಿದೆ. ಸರ್ಕಾರ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಎಲ್ಲ ಪಕ್ಷದವರ ವಿಲತೆ ಇದೆ. ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರಲಿದೆ. ನಾವೆಲ್ಲ ಸೇರಿ ಹೋರಾಟ ಮಾಡೋಣ ಎಂದರು.

ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ, ಪ್ರತಿ ಹಂತದಲ್ಲಿ ನಮಗೆ ಅನ್ಯಾಯ ಎಸಗುತ್ತಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ವಕೀಲರ ಸಂ ಸದಾ ಹೋರಾಟಕ್ಕೆ ಬೆಂಬಲವಾಗಿರಲಿದೆ ಎಂದು ಭರವಸೆ ನೀಡಿದರು.

ಗೌತಮ್​ ಪಾಟೀಲ್​ ಮಾತನಾಡಿ, ಮೀಸಲಾತಿ ನಮಗೆ ಸಂವಿಧಾನ ಕಲ್ಪಿಸಿದೆ. ನಾವು ಯಾರ ಪಾಲನ್ನೂ ಕಸಿದುಕೊಂಡಿಲ್ಲ. ಆದರೆ, ಹಸಿರು ಪ್ರತಿಷ್ಠಾನದವರು ನಮ್ಮ ಮೀಸಲು ರದ್ಧತಿಗೆ ಹೋರಾಟ ರೂಪಿಸುತ್ತಿದ್ದಾರೆ. ಇದನ್ನು ಸಹಿಸಲಾಗದು. ಅನ್ಯಾಯ ಹೀಗೆ ಮುಂದುವರಿದರೆ ಪ್ರತ್ಯೇಕ ರಾಜ್ಯದ ಕೂಗು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರದ ತಾಲೂಕು ಕ್ರೀಡಾಂಗಣದಿಂದ ಅಶೋಕ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ಬಳಿಕ ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೋರಾಟಗಾರರಾದ ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ಬಸವರಾಜ, ಪ್ರಭು ಉಪನಾಳ, ಆರ್​.ಬಿ.ಪಾನಂಟಿ, ಆಸ್​ೀ ಅಲಿ, ವಿ.ಎಂ.ಭೂಸನೂರ ಮಠ, ಜೆಡಿಎಸ್​ ಪ್ರಮುಖರಾದ ರಾಜು ನಾಯಕ, ಸುರೇಶ ಭೂಮರಡ್ಡಿ, ಬಿಜೆಪಿ ರಾಜ್ಯ ಕಾರ್ಯಡಾ.ಬಸವರಾಜ ಕ್ಯಾವಟರ್​, ಉದ್ಯಮಿ ಶ್ರೀನಿವಾಸ ಗುಪ್ತಾ, ವಿವಿಧ ಸಂಟನೆಗಳ ಪ್ರತಿನಿಧಿಗಳು, ಸಾವಿರಾರು ವಿದ್ಯಾರ್ಥಿಗಳಿದ್ದರು.

ಎಸಿಗೆ ನಿರ್ದೇಶನ ನೀಡಲು ಡಿಸಿಗೆ ಮನವಿ
371(ಜೆ) ಪ್ರಮಾಣ ಪತ್ರ ವಿತರಣೆಗೆ ನಿಯಮಗಳಿವೆ. ಆದರೆ, ಕೊಪ್ಪಳ ಸಹಾಯಕ ಆಯುಕ್ತರು ಅನಗತ್ಯ ದಾಖಲೆ ಕೇಳುತ್ತಿದ್ದಾರೆ. ಇದರಿಂದ ಪ್ರಮಾಣಪತ್ರ ಪಡೆಯಲು ಅರ್ಹರಿಗೆ ಸಮಸ್ಯೆ ಆಗುತ್ತಿದೆ. ನಿಯಮಾವಳಿ ಪ್ರಕಾರ ಪ್ರಮಾಣಪತ್ರ ವಿತರಿಸಬೇಕು. ಆದರೆ, ತಮ್ಮ ಕಚೇರಿಯಿಂದಲೇ ಚೆಕ್​ಲಿಸ್ಟ್​ ಮಾಡಿಸಿದ್ದು, ಅದರ ಪ್ರಕಾರವೇ ದಾಖಲಾತಿ ನೀಡುವಂತೆ ಕೇಳುತ್ತಿದ್ದಾರೆ. ಒಂದು ದಾಖಲೆ ಇಲ್ಲದಿದ್ದರೂ ಅರ್ಜಿ ತಿರಸ್ಕರಿಸಲಾಗುತ್ತಿದೆ. ಪ್ರಮಾಣ ಪತ್ರ ವಿತರಣೆಗೆ 9 ನಿಯಮಗಳಿದ್ದು, ಅದರಲ್ಲಿ ಯಾವ ಒಂದು ದಾಖಲೆ ನೀಡಿದರೂ ವಿತರಿಸಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆ ಡಿಸಿ ನಲಿನ್​ ಅತುಲ್​ಗೆ ಹೋರಾಟಗಾರರು ಪ್ರತಿಭಟನೆ ಬಳಿಕ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು. ಪರಿಶೀಲಿಸಿ ನಿರ್ದೇಶನ ನೀಡುವುದಾಗಿ ಡಿಸಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net