ಕೊಪ್ಪಳ: 2025ರ ದ್ವೀತಿಯ ಪಿಯುಸಿ ಪರೀಕ್ಷೆ-2 ಈಗಾಗಲೇ ಮುಗಿದಿದ್ದು, ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವ ಸಂಬಂಧ 3ನೇ ಪರೀಕ್ಷೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ.
ಜೂನ್ 9 ರಿಂದ 20 ರವರೆಗೆ ದ್ವೀತಿಯ ಪಿಯುಸಿ ಪರೀಕ್ಷೆ-&3 ನಡೆಯಲಿದೆ. ನೋಂದಾಯಿಸಿಕೊಳ್ಳಲು ಮೇ 26 ಕೊನೆಯ ದಿನ. ಅನುತ್ತೀರ್ಣ ವಿದ್ಯಾರ್ಥಿಗಳು ತಮ್ಮ ಕಾಲೇಜಿಗೆ ಭೇಟಿ ನೀಡಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ ಅವರ ಕಾಲೇಜಿನಲ್ಲಿ ಪರಿಹಾರ ಬೋಧನೆ ನಡೆಸಲಾಗುವುದೆಂದು ಡಿಡಿಪಿಯು ಜಗದೀಶ ತಿಳಿಸಿದ್ದಾರೆ.