ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯಲಿ:ದೊಡ್ಡನಗೌಡ ಪಾಟೀಲ್​ ಒತ್ತಾಯ

doddanagoouda patil kustagi MLA K.S.Iswarappa bjp
DoddanaGouda Patil
Published on

ಕೊಪ್ಪಳ: ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಬಿಎಸ್​ವೈ ಕುಟುಂಬ ನಿಂದಿಸುವುದು ಬಿಡಬೇಕು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಅವರ ಸೇವೆಗೆ ತಕ್ಕಂತೆ ಮುಂದೆ ಉತ್ತಮ ಸ್ಥಾನಮಾನ ಸಿಗಲಿವೆ ಎಂದು ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್​ ಒತ್ತಾಯಿಸಿದರು.

ಮಾಜಿ ಸಿಎಂ ಬಿಎಸ್​ವೈ ಪಕ್ಷ ಸಂಟನೆಗೆ ಜೀವನವನ್ನೇ ಮೀಸಲಿಟ್ಟಿದ್ದಾರೆ. ಇಳಿ ವಯಸ್ಸಿನಲ್ಲಿ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಶ್ವರಪ್ಪ ಅವರಿಗೆ ಇವರೆಗೆ ಪಕ್ಷ ಎಲ್ಲವನ್ನೂ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್​ ನೀಡಬೇಕಿತ್ತು. ಈ ಬಗ್ಗೆ ನನಗೂ ಬೇಸರವಿದೆ. ಯಾವುದೋ ಕಾರಣಕ್ಕೆ ತಪ್ಪಿರಬಹುದು. ಮುಂದೆ ಅವಕಾಶಗಳಿವೆ. ಆಗ ಸರಿಪಡಿಸಲಿದ್ದಾರೆ. ಕಳೆದ ಚುನಾವಣೆಯ್ಲೂ ಸಮುದಾಯದವರಿಗೆ ಬಿಜೆಪಿ ಟಿಕೆಟ್​ ಸಿಕ್ಕಿಲ್ಲ. ಆಗ ಈಶ್ವರಪ್ಪ ಸಚಿವರಾಗಿದ್ದರು. ಆಗ ಸಮುದಾಯದ ಬಗ್ಗೆ ಧ್ವನಿ ಎತ್ತಲಿಲ್ಲ. ಸದ್ಯ ತಮ್ಮ ಪುತ್ರನಿಗೆ ಟಿಕೆಟ್​ ಸಿಕ್ಕಿಲ್ಲವೆಂಬ ಕಾರಣಕ್ಕೆ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಶ್ವರಪ್ಪ ಅವರೂ ನಮ್ಮ ನಾಯಕ. ಹಿಂದೆಯೂ ಬಿಎಸ್​ವೈ ವಿರುದ್ಧ ನಿಂದಿಸಿದರು. ರಾಯಣ್ಣ ಬ್ರಿಗೇಡ್​ ರಚಿಸಿದರು. ಬಳಿಕ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲೇ ಉಳಿದರು. ಈಗಲೂ ಕಾಲ ಮಿಂಚಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯಬೇಕು. ಯಡಿಯೂರಪ್ಪ ಕುಟುಂಬ ನಿಂದನೆ ಕೈ ಬಿಡಬೇಕು. ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು. ಕಾಂತೇಶ ಅವರಿಗೂ ಮುಂದೆ ಭವಿಷ್ಯವಿದೆ. ಕುರುಬ ಸಮುದಾಯವನ್ನು ಬಿಜೆಪಿ ಕಡೆಗಣಿಸಿಲ್ಲ. ಮುಂದೆಯೂ ಕಡೆಗಣಿಸುವುದಿಲ್ಲ ಎಂಬ ವಿಶ್ವಾಸವಿದೆ. ಇದನ್ನು ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಕೊಪ್ಪಳದಲ್ಲಿ ಸಂಸದ ಸಂಗಣ್ಣಗೆ ಟಿಕೆಟ್​ ತಪ್ಪಿಸಿದವರಲ್ಲಿ ನಾನು ಇರುವೆ ಎಂಬ ಬಗ್ಗೆ ಅವರಿಗೆ ತಪ್ಪು ಕಲ್ಪನೆ ಆಗಿದೆ. ಈ ಬಗ್ಗೆ ಮನವೊಲಿಕೆ ಮಾಡಿದ್ದೇವೆ. ಅವರು ಬಿಜೆಪಿಯಲ್ಲಿಯೇ ಇದ್ದಾರೆ. ಅವರ ಬೆಂಬಲಿಗರು ಕೆಲವರು ಬೇಜಾರಾಗಿ ಕಾಂಗ್ರೆಸ್​ ಸೇರಿದ್ದಾರೆ. ಶಿವರಾಮಗೌಡರು ವಾಪಸ್​ ಬಿಜೆಪಿಗೆ ಬರುತ್ತಿದ್ದಾರೆ. ಚುನಾವಣೆ ವೇಳೆ ಪಾಂತರ ಸಹಜ ಕ್ರಿಯೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ಮಾಧ್ಯಮ ಸಂಚಾಲಕರಾದ ಮಹೇಶ ಹಾದಿಮನಿ, ಅಮಿತ್​ ಕಂಪ್ಲಿಕರ್​, ಡಿ.ಮಲ್ಲಣ್ಣ ಇದ್ದರು.

ಈಶ್ವರಪ್ಪ ಅವರು ತಾವು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ ಅಮಿತ್​ ಷಾ ಭೇಟಿ ಆಗಿರಲಿಕ್ಕಿಲ್ಲ. ಅವರು ಕರೆ ನೀಡಿದ್ದರ ಬಗ್ಗೆ ನಮಗೆ ಗೊತ್ತಿಲ್ಲ. ಈಶ್ವರಪ್ಪ ಅವರೇ ಹೇಳಿದ್ದರು. ದೊಡ್ಡನಗೌಡ ಪಾಟೀಲ್​. ವಿಪಕ್ಷ ಮುಖ್ಯ ಸಚೇತಕ.

ದೊಡ್ಡನಗೌಡ ಪಾಟೀಲ್​. ವಿಪಕ್ಷ ಮುಖ್ಯ ಸಚೇತಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net