ವಿಜ್ಞಾನ ಕೇಂದ್ರಕ್ಕೆ ಡಿಸಿ ನಲಿನ್ ಅತುಲ್ ಭೇಟಿ

dc visits science center koppal Naleen athul
ಕೊಪ್ಪಳದಲ್ಲಿ ಗುರುವಾರ ಡಿಸಿ ನಲಿನ್ ಅತುಲ್ ಪ್ರಾದೇಶಿಕ ವಿಜ್ಞಾನಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನ ಮಾದರಿ ವೀಕ್ಷಿಸಿದರು. ಮುನಿರಾಬಾದ್ ಡಯಟ್ ಉಪನ್ಯಾಸಕ ಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಕೊಪ್ಪಳ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರ ಸ್ವಾಮಿ ಆರ್. ಬೆಣಕಲ್‌ಮಠ, ಕ್ಯೂರೇಟರ್ ಮೈಲಾರಪ್ಪ ಇದ್ದರು.
Published on

ಕೊಪ್ಪಳ: ನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಗುರುವಾರ ಡಿಸಿ ನಲಿನ್ ಅತುಲ್ ಭೇಟಿ ನೀಡಿ ಮಾದರಿಗಳನ್ನು ವೀಕ್ಷಿಸಿದರು.

ಮೂರು ಕೊಠಡಿಗಳಲ್ಲಿ 27 ಒಳಾಂಗಣ ವಿಜ್ಞಾನದ ಮಾದರಿಗಳನ್ನು ಅಳವಡಿಸಲಾಗಿದೆ. ಅವುಗಳ ಮಹತ್ವ ಕುರಿತು ಮತ್ತು ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಹೆಚ್ಚಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಮಾದರಿಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸುವಂತೆ ಸೂಚಿಸಿದರು. ಕೇಂದ್ರದಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು.

ಕೇಂದ್ರವು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ. ನಿತ್ಯ ಒಂದೊAದು ಶಾಲೆಯ ಮಕ್ಕಳು ಭೇಟಿ ನೀಡಿ ಮಾದರಿಗಳನ್ನು ವೀಕ್ಷಿಸಿ ಹೋಗುತ್ತಿದ್ದಾರೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ರಾಷ್ಟಿçÃಯ ಗಣಿತ ದಿನಾಚರಣೆ, ಅರಣ್ಯ ದಿನ, ಜಲ ದಿನ, ಶೂನ್ಯ ನೆರಳು ದಿನ, ಆಹಾರ ದಿನ, ಯುವ ದಿನ, ಮಹಿಳಾ ದಿನ ಸೇರಿ ನಾನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅವುಗಳ ಮಹತ್ವದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ಕೇಂದ್ರದ ಸಿಬ್ಬಂದಿ ಡಿಸಿಗೆ ಮಾಹಿತಿ ನೀಡಿದರು.

ಮುನಿರಾಬಾದ್ ಡಯಟ್ ಉಪನ್ಯಾಸಕ ಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಕೊಪ್ಪಳ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರ ಸ್ವಾಮಿ ಆರ್. ಬೆಣಕಲ್‌ಮಠ, ಕ್ಯೂರೇಟರ್ ಮೈಲಾರಪ್ಪ, ಶಿಕ್ಷಣ ಸಹಾಯಕ ಫಕೀರ್ ಸಾಬ್ ಮಾದರಿ ವಿವರಿಸಿದರು. ತಾಂತ್ರಿಕ ಸಹಾಯಕ ಮಹಾಲಿಂಗಪ್ಪ, ತಂತ್ರಜ್ಞ ಶಂಕ್ರಪ್ಪ ರಾಜೂರು, ವಿಜ್ಞಾನ ಸಹಾಯಕ ಫಯಾಜುದ್ದೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net