

ಕಾಸರಗೋಡು: ಗಾಂಧಿ ಜಯಂತಿ ಅಂಗವಾಗಿ ಹೈಸ್ಕೂಲ್, ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ‘ಗಾಂಧೀಜಿ ಖಾದಿ ಸ್ವಾತಂತ್ರೃ ಹೋರಾಟ’ ವಿಷಯದಲ್ಲಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಖಾದಿ ಗ್ರಾಮ ಕೈಗಾರಿಕಾ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಅಂಬಲತ್ತರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಅಭಿರಾಜ್ ಎಂ, ಪ್ರಸಾದ್ ಕೆ. ಪ್ರಥಮ ಬಹುಮಾನ ಪಡೆದರು. ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಶ್ರೀಹರಿ ಪಿ.ಕೆ. ಮತ್ತು ಶ್ರೀದೀಪ್ ಟಿ. ದ್ವಿತೀಯ ಸ್ಥಾನ ಪಡೆದರು. ಮಂಜೇಶ್ವರದ ಎಸ್.ಎ.ಟಿ.ಎಚ್.ಎಸ್.ನ ಕೆ.ಪಿ.ಪೂಜಾಲಕ್ಷ್ಮೀ ತೃತೀಯ ಬಹುಮಾನ ಪಡೆದರು.
ಅ.29ರಂದು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜೇತರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿಜೇತರಿಗೆ ಬಹುಮಾನ ವಿತರಿಸಲಾಯಿತು.