ಜಿಲ್ಲಾ ಕಸಾಪ ಸಾಹಿತ್ಯ ಸಿಂಚನ ಕಾರ್ಯಕ್ರಮ

26GDG05
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಏರ್ಪಡಿಸಿದ ಕನ್ನಡ ರಂಗಭೂಮಿಗೆ ಸಕ್ಕರಿ ಬಳಾಚಾರ್ಯರ ಕೊಡುಗೆ ಕುರಿತು ಎಚ್​. ಬಿ. ಪೂಜಾರ ಉಪನ್ಯಾಸ ನೀಡಿದರು. ಡಾ. ಎಚ್​. ಬಿ. ಪೂಜಾರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಶ್ರೀಕಾಂತ ಬಡ್ಡೂರ, ಡಾ. ಶಂಕರ ಬಾರಿಕೇರ, ಆರ್​. ಕೆ. ಮೋನೆ, ರಾಜಶೇಖರ ಕರಡಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಆಧುನಿಕ ಕರ್ನಾಟಕ ನಾಟಕ ಪಿತಾಮಹ ಕೀರ್ತನಕಾರರೆಂದು ಪ್ರಸಿದ್ದಿ ಪಡೆದ ಸಕ್ಕರಿ ಬಾಳಾಚಾರ್ಯರು, ಮರಾಠಿಗೆ ಮಾರುಹೋಗಿದ್ದ ಉತ್ತರ ಕರ್ನಾಟಕದಲ್ಲಿ ಕನ್ನಡದ ಅಲೆಯನ್ನು ಸೃಷ್ಟಿಸಲು ಶ್ರಮಿದರು ಎಂದು ಉಪನ್ಯಾಸಕ ಎಚ್​. ಬಿ. ಪೂಜಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಏರ್ಪಡಿಸಿದ ಕನ್ನಡ ರಂಗಭೂಮಿಗೆ ಸಕ್ಕರಿ ಬಳಾಚಾರ್ಯರ ಕೊಡುಗೆ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಬಾಳಾಚಾರ್ಯರ ಪ್ರಯತ್ನದಿಂದ ಉತ್ತರ ಕರ್ನಾಟಕದ ಪ್ರಥಮ ನಾಟಕ ಮಂಡಳಿ ವೀರನಾರಾಯಣ ಪ್ರಸಾದಿತ ಕೃತಪುರ ನಾಟಕ ಮಂಡಳಿಯು 1874 ರಲ್ಲಿ ಗದಗನಲ್ಲಿ ಹುಟ್ಟಿಕೊಂಡಿತು. ಕನ್ನಡದ ಪ್ರಥಮ ಸ್ವತಂತ್ರ ನಾಟಕ "ಉಷಾಹರಣ' ಮೊಟ್ಟ ಮೊದಲ ಬಾರಿಗೆ ಪ್ರದಶಿರ್ಸಲ್ಪಟ್ಟಿತು. "ಮುಕುಂದ ನಾಮಾಮೃತ' ಎನ್ನುವ ಅಚ್ಚ ಕನ್ನಡ ಕೀರ್ತನೆಯನ್ನು ರಚಿಸಿದ್ದಾರೆ ಎಂದರು.
ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ, ಡಾ. ಎಚ್​. ಬಿ. ಪೂಜಾರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಶ್ರೀಕಾಂತ ಬಡ್ಡೂರ, ಡಾ. ಶಂಕರ ಬಾರಿಕೇರ, ಆರ್​. ಕೆ. ಮೋನೆ, ರಾಜಶೇಖರ ಕರಡಿ, ರಮೇಶ ಬೇಗೂರ, ವೆಂಕಟೇಶ ಗುಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net