

ಕೆರೂರ : ಜಿಲ್ಲೆಯ 12 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.22 ರಿಂದ ಎರಡೂ ದಿನಗಳವರೆಗೆ ನೀರಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವೇದಿಕೆ ಸಿದ್ಧಗೊಳಿಸಲಾಗಿದೆ.
ಸಮ್ಮೇಳನದ ಮುಖ್ಯ ವೇದಿಕೆ ಮಹಾಮಂಟಪಕ್ಕೆ ಶ್ರೀಮಂತ ಕೆ.ಟಿ. ದೇಸಾಯಿ ಹಾಗೂ ಶ್ರೀಮಂತ ಆರ್.ಟಿ. ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಸಮ್ಮೇಳನದ ಅಂಗವಾಗಿ ಕನ್ನಡ ಧ್ವಜಗಳು, ಸ್ವಾಗತ ಬ್ಯಾನರಗಳು,ರಾರಾಜಿಸುತ್ತಿವೆ.
ಮಾ.22ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜರೋಹಣವನ್ನು ಸರ್ಕಾರಿ ವಕೀಲ ಬಸವರಾಜ ಗೊಡಚಿ, ಪರಿಷತ್‌ನ ಧ್ವಜರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿನಾಡ ಧ್ವಜರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಬಿ.ಎ್. ಹೊರಕೇರಿ ನೇರವೆರಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುನ್ನ ಭುವನೇಶ್ವರಿ ದೇವಿ ಪೂಜಾ ಕಾರ್ಯಕ್ರಮ ನಡೆಯಲಿದ್ದೂ, ಮೆರವಣಿಗೆ ಉದ್ಘಾಟನೆಯನ್ನು ಆನಂದರಾವ್ ದೇಸಾಯಿ ಮಾಡಲಿದ್ದಾರೆ. ಗ್ರಾಮದ ಹಳದಮ್ಮದೇವಿ ದೇವಸ್ಥಾನದಿಂದ ಶ್ರೀಮಂತ ಆರ್.ಟಿ. ದೇಸಾಯಿ ಮುಖ್ಯ ವೇದಿಕೆಯವರಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಿಂದ,ನತ್ಯ, ಡೊಳ್ಳು ಕುಣಿತ,ಕನ್ನಡ ಜನಪದ ಹಾಡುಗಳು ಸಮ್ಮೇಳನಕ್ಕೆ ರಂಗು ನೀಡಲಿವೆ.
ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಎಚ್.ಎಸ್ ಸತ್ಯನಾರಾಯಣ ಉದ್ಘಾಟಿಸಲಿದ್ದು, ಸಮ್ಮೇಳನದ ಅಧ್ಯಕ್ಷತೆಯನ್ನು ಶಾಸಕ ಜೆ.ಟಿ. ಪಾಟೀಲ ವಹಿಸಿಕೊಳ್ಳಲಿದ್ದಾರೆ.
ಮಧ್ಯಾಹ್ನ 12.30ರಿಂದ ಗೋಷ್ಠಿಗಳು ಜರುಗಲಿವೆ.