

ಕೊಪ್ಪಳ: ನಗರದ ಗಾಂಧಿನಗರದ ಅಂಗನವಾಡಿ ಕೇಂದ್ರ&1 ಮತ್ತು 2ಕ್ಕೆ ಸೋಮವಾರ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಎರಡೂ ಕೇಂದ್ರದಲ್ಲಿ ಅಂಗನವಾಡಿ ಸಿಬ್ಬಂದಿ ಇರಲಿಲ್ಲ. ಕೇಂದ್ರ 2ರಲ್ಲಿ ಬೇರೆ ವ್ಯಕ್ತಿಯನ್ನು ಕೂಡಿಸಲಾಗಿತ್ತು. ಎರಡೂ ಕೇಂದ್ರದಲ್ಲಿ ಮಕ್ಕಳಿರಲಿಲ್ಲ. ಅಸ್ವಚ್ಛತೆ, ಕುಡಿವ ನೀರು, ಶೌಚಕ್ಕೂ ತೆರಳಲು ನೀರಿಲ್ಲದಿರುವುದು ಬೆಳಕಿಗೆ ಬಂದಿದೆ. ಆವರಣದಲ್ಲಿ ಒಳಚರಂಡಿ ತ್ಯಾಜ್ಯ ಹರಿಡಿದ್ದು ಕಂಡುಬಂತು. ಅಡುಗೆದಾರರೂ ಇರಲಿಲ್ಲ. ಅಡುಗೆಯನ್ನು ಮಾಡಿಲ್ಲ. ಹಾಜರಾತಿ ಪುಸ್ತಕದಲ್ಲಿ ಜು.20 ಮತ್ತು 22ರ ದಿನಾಂಕದಂದು ಹಾಜರಿ ನಮೂದಿಸಿಲ್ಲ.
ಅಂಗನವಾಡಿ ಸಿಬ್ಬಂದಿ ಸಹಿ ಸಹ ಮಾಡಿರಲಿಲ್ಲ. ನ್ಯಾಯಾಧೀಶರ ಭೇಟಿ ವಿಷಯ ತಿಳಿಯುತ್ತಲೇ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಆಗಮಿಸಿದರು. ಆದರೆ, ನ್ಯಾಯಾಧೀಶರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲ. ಈ ಬಗ್ಗೆ ತಕ್ಷಣ ವರದಿ ನೀಡುವಂತೆ ಜಡ್ಜ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆದೇಶಿಸಿದರು.