ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ನಿಧನ

udp-15-manjunath
Published on

ಉಡುಪಿ: ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಕುತ್ಪಾಡಿ ನಿವಾಸಿ ಮಂಜುನಾಥ ಆನಂದ (53) ಮಂಗಳವಾರ ರಾತ್ರಿ ಆನಾರೋಗ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2007 ರಲ್ಲಿ ಉಡುಪಿ ಜಿಲ್ಲೆಯ ಡಿಸಿ ಕಚೇರಿಯಲ್ಲಿ ಪ್ರಥಮವಾಗಿ ಪಿಎಲ್​ಒ ( ಪೇಪರ್​ ಲೆಸ್​ ಆಫೀಸ್​) ಆರಂಭಿಸಿದ ಸಮಯದಲ್ಲಿ ಎನ್​ಐಸಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ನಂತರ ಜಿಲ್ಲಾ ವೆಬ್​ ಸೈಟ್​ ನಿರ್ವಹಣೆ, ಇ ತಂತ್ರಾಂಶ ನಿರ್ವಹಣೆ, ಚುನಾವಣಾ ಸಮಯ ಐ.ಟಿ. ಎಪ್ಲಿಕೇಶನ್​ ನಿರ್ವಹಣೆ ಸೇರಿದಂತೆ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹುಟ್ಟೂರು ಕೋಟ ಗಿಳಿಯಾರಿನಲ್ಲಿ ಶವಸಂಸ್ಕಾರ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net