

ಮಂಡ್ಯ: ಜಿಲ್ಲೆಯ ಮಳೆಯಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಮತ್ತು ಅಂಗನವಾಡಿಯಲ್ಲಿ ಕಟ್ಟಡ ಕುಸಿದಿರುವ ಕುರಿತು ವಾಹಿತಿ ಪಡೆದು ಮರು ನಿರ್ವಾಣ ವಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಜಯರಾಂ ರಾಯಪುರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭಾನುವಾರ ಆಯೋಜಿಸಿದ್ದ ಜಿಲ್ಲೆಯಲ್ಲಿ ಉಂಟಾದ ಮಳೆಹಾನಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು. ಸೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಕಂಬ, ರಸ್ತೆಗಳು ಹಾಗೂ ಅನೇಕ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಕ್ರಮವಹಿಸಿ ಎಂದು ಹೇಳಿದರು
ಅಂತೆಯೇ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳ ಬಗ್ಗೆ ಗಮನ ಹರಿಸಿ ಸೂಕ್ತ ರೀತಿಯಲ್ಲಿ ಕ್ರಮವಹಿಸಿ. ಇನ್ನು ಈವರೆಗೆ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅವರು ವರದಿ ನೀಡಿರುತ್ತಾರೆ. ಅದಕ್ಕೆ ತಕ್ಕಂತೆ ಪರಿಹಾರ ತಂತ್ರಾಂಶದ ಮೂಲಕ ಸಂತ್ರಸ್ತರಿಗೆ ಪರಿಹಾರದ ಹಣವನ್ನು ಪಾವತಿಸಲು ತ್ವರಿತವಾಗಿ ಕ್ರಮ ವಹಿಸಿ.
ಅಧಿಕಾರಿಗಳು ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕು. ಯಾವುದಾದರೂ ಯೋಜನೆಯಲ್ಲಿ ಬದಲಾವಣೆ ತಂದರೆ ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂಬ ಅಭಿಪ್ರಾಯವಿದ್ದರೆ ಮುಕ್ತವಾಗಿ ಚರ್ಚಿಸಿ. ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ವ್ಯವಸ್ಥೆ ವಾಡಿ ನೀರು ಒದಗಿಸುವ ಉತ್ತಮ ಕಾರ್ಯಕ್ರಮ. ನಿಗದಿಪಡಿಸಿರುವ ಅವಧಿಗೆ ಪೂರ್ಣಗೊಳಿಸಲು ಹಾಗೂ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಏಜೆನ್ಸಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದರು.
ಪಾಂಡವಪುರ ತಾಲೂಕಿನಲ್ಲಿ ಅಂಕೇಗೌಡ ಅವರು ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ನಡೆಸುತ್ತಿರುವುದು ಒಳ್ಳೆಯ ವಿಷಯವಾಗಿದೆ. ಇಲ್ಲಿ ಹೆಚ್ಚು ಮಕ್ಕಳು ಭೇಟಿ ನೀಡುವಂತಾಗಬೇಕು. ಇದಕ್ಕಾಗಿ ಪುಸ್ತಕಗಳ ಜೋಡಣೆ ಕುರಿತಂತೆ ಹಾಗೂ ಪ್ರವಾಸಿ ತಾಣ ವಾಡಲು ಯೋಜನೆ ರೂಪಿಸಬೇಕು. ಹಿಂದುಳಿದ ವರ್ಗ, ಸವಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರವನ್ನು ಒದಗಿಸಬೇಕು. ಅಧಿಕಾರಿಗಳು ಭೇಟಿ ನೀಡಿದಾಗ ಮಕ್ಕಳೊಂದಿಗೆ ಊಟ ಸೇವಿಸಿ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡಿದಾಗ ವಸತಿ ನಿಲಯದಲ್ಲಿ ವಾಸ್ತವ್ಯ ವಾಡಲಿದ್ದೇನೆ ಎಂದು ಹೇಳಿದರು.
ಮೀನುಗಾರಿಕೆ ವಾಡುವವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಅವಕಾಶಗಳಿದ್ದು, ಇಲಾಖೆಯು ಮೀನುಗಾರರನ್ನು ಆರ್ಥಿಕವಾಗಿ ಸದೃಢ ವಾಡುವ ಹಾದಿಯಲ್ಲಿ ಚಿಂತಿಸಬೇಕು. ಕೆರೆಗಳನ್ನು ಹರಾಜು ವಾಡುವಾಗ ಹೋಬಳಿವಾರು ವಾಡಿದರೆ ಮೀನುಗಾರರಿಗೆ ಉಪಯುಕ್ತವಾಗಲಿದೆ. ಇನ್ನು ಮಂಡ್ಯ ನಗರದ ಬೀಡಿ ಕಾಲನಿಯಲ್ಲಿ ಮಳೆ ಬಂದ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಅಧಿಕಾರಿಗಳ ತಾಂತ್ರಿಕ ತಂಡ ರಚಿಸಲಾಗಿದೆ. ವರದಿಯನ್ನು ನೀಡಿದರೆ ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್. ಹುಲ್ಮನಿ ವಾತನಾಡಿ, ಜಿಲೆಯಲ್ಲಿ ನರೇಗಾ, ವಸತಿ ಯೋಜನೆ, ಲಿಂಕ್ ಡಾಕ್ಯೂಮೆಂಟ್, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಲೈಬ್ರರಿ ಹಾಗೂ ಇನ್ನಿತರೆ ಯೋಜನೆಗಳು ಜನರಿಗೆ ಹೆಚ್ಚು ಅನುಕೂಲವಾಗುವಂತೆ ಕ್ರಮ ವಹಿಸಬೇಕು. ಅಂತೆಯೇ 2022-23 ನೇ ಸಾಲಿನ 15 ನೇ ಹಣಕಾಸು ಆಯೋಗದ ನಿಬರ್ಂಧಿತ ಅನುದಾನದಡಿ 2.86 ಕೋಟಿ ರೂಗೆ ಕ್ರಿಯಾಯೋಜನೆಯನ್ನು ವಿವರಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ, ಉಪ ಅರಣ್ಯಸಂರಕ್ಷಣಾಧಿಕಾರಿ ರುಥ್ರೆನ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಉಪಕಾರ್ಯದರ್ಶಿ ಸರಸ್ವತಿ, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದ ಮೂರ್ತಿ, ಆರ್.ಐಶ್ವರ್ಯಾ ಅಧಿಕಾರಿಗಳಿದ್ದರು.