ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

District In-charge Secretary visits Government Hospital
ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಾಹಿಂ ವಿವಿಧ ವಿಭಾಗದಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಹಾಗೆಯೇ, ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಂದ ಮಾಹಿತಿ ಪಡೆದರು.
ಮಹಿಳಾ ಪ್ರಸೂತಿ ತಜ್ಞರು ಒಬ್ಬರೇ ಇರುವುದರಿಂದ ದಿನಪೂರ್ತಿ ಅವರೊಬ್ಬರೇ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ರಾತ್ರಿ ವೇಳೆ ಹೆರಿಗೆಗೆ ಅನಾನುಕೂಲವಾಗುತ್ತಿದೆ. ಡಯಾಲಿಸಿಸ್ ಯಂತ್ರಗಳು ಕೆಟ್ಟು ವರ್ಷವಾಗಿದೆ ಹಾಗೂ ಅರಿವಳಿಕೆ ತಜ್ಞರು ಮತ್ತು ಇನ್ನಿತರ ಸಿಬ್ಬಂದಿ ಕೊರತೆ ಇದೆ ಎಂದು ಸಾರ್ವಜನಿಕರು ಗಮನ ಸೆಳೆದರು.
ಪ್ರಸ್ತುತ 1 ಡಯಾಲಿಸಿಸ್ ಯಂತ್ರ ಸರಿಪಡಿಸಲಾಗಿದೆ. ಇನ್ನೊಂದು ಹೊಸ ಯಂತ್ರ ಬೇಕಿದೆ, ಇನ್ನೊಬ್ಬ ಪ್ರಸೂತಿ ತಜ್ಞರ ಅವಶ್ಯಕತೆ ಇದೆ ಕೆಲ ಸಿಬ್ಬಂದಿ ಕೊರತೆ ಇದೆ ಎಂದು ಡಿಎಚ್‌ಒ ಪ್ರತಿಕ್ರಿಯಿಸಿದರು.
ವೈದ್ಯರ ಕೊರತೆ ಸರಿಪಡಿಸಿ: ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಬಗ್ಗೆ ಸರ್ಕಾರದ ಜತೆ ಪತ್ರ ವ್ಯವಹಾರ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಹಾಗೂ ಪ್ರಸೂತಿ ತಜ್ಞರು ಒಬ್ಬರೇ ಇದ್ದರೆ ಎರವಲು ಸೇವೆಯಲ್ಲಿ ವೈದ್ಯರನ್ನು ನೇಮಿಸಿಕೊಳ್ಳಿ, ರಾತ್ರಿ ವೇಳೆ ಸೇರಿ ದಿನದ 24 ಗಂಟೆ ಮಹಿಳಾ ವೈದ್ಯರು ಇರುವಂತೆ ನೋಡಿಕೊಳ್ಳಿ ಎಂದು ಆರೋಗ್ಯಾಧಿಕಾರಿಗೆ ಸಲ್ಮಾ ಸೂಚಿಸಿದರು.
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net