ಇಂದು&ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

BLDE launches City Medical Center
ಸಚಿವ ಎಂ.ಬಿ. ಪಾಟೀಲ
Published on

ವಿಜಯಪುರ : ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಏ. 5 ಮತ್ತು 6 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಏ. 5 ರಂದು ಬೆಳಗ್ಗೆ 9.30ಕ್ಕೆ ಡಾ. ಬಾಬು ಜಗಜೀವನರಾಮ್​ ಅವರ 118ನೇ ಜಯಂತಿ ಅಂಗವಾಗಿ ಅಥಣಿ ರಸ್ತೆಯಲ್ಲಿನ ಮಹನೀಯರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವರು.

ಬೆಳಗ್ಗೆ 10ಕ್ಕೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ 27 ಲ ರೂ. ಗಳ ವೆಚ್ಚದಲ್ಲಿ ನಿರ್ಮಿಸಿದ ಮಳೆಮಲ್ಲೆಶ್ವರ ಕೆಳಗಿನಮಠ ಯಾತ್ರಿ ನಿವಾಸ ಕಟ್ಟಡ ಹಾಗೂ 110 ಕೆವಿ ವಿದ್ಯುತ್​ ಸ್ಟೇಶನ್​ ಸಚಿವರು ಉದ್ಘಾಟಿಸುವರು. ಸಂಜೆ 4ಕ್ಕೆ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ 110 ಕೆವಿ ವಿದ್ಯುತ್​ ಸ್ಟೇಶನ್​ ಉದ್ಘಾಟನೆ, ಸಂಜೆ 6ಕ್ಕೆ ಕಾಖಂಡಕಿ ಗ್ರಾಮದಲ್ಲಿ 5 ಕೋಟಿ ರೂ. ಗಳ ವೆಚ್ಚದ ಕಾಖಂಡಕಿ& ಕಾರಜೋಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು 110 ಕೆವಿ ವಿದ್ಯುತ್​ ಸ್ಟೇಶನ್​ ಉದ್ಘಾಟಿಸಲ್ದಾರೆ.

ನಂತರ ಕಾಖಂಡಕಿ ಗುರುದೇವರ ಆಶ್ರಮದವರೆಗೆ 90 ಲ ರೂ. ಗಳ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಕಾಖಂಡಕಿ ಗ್ರಾಮದಲ್ಲಿ 50 ಲ ರೂ. ಗಳ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು.

ಏ. 6 ರಂದು ಮಧ್ಯಾಹ್ನ 12ಕ್ಕೆ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸುೇತ್ರ ಶ್ರೀ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ದಿ. ಎಂ.ಸಿ. ಮನಗೂಳಿ ಅವರ ಸ್ಮರಣಾರ್ಥ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರ ಕಚೇರಿಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net