ಯಾವುದೇ ಅಹಿತಕರ ಘಟನೆಗಳಿಗೆ ಬೇಡ ಅವಕಾಶ; ಸಚಿವ ತಂಗಡಗಿ ಮನವಿ

TANGADAGI
ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರನ್ನು ಗ್ರಾಪಂ ಅಧ್ಯಕ್ಷೆ ಶರಣಮ್ಮ, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಸನ್ಮಾನಿಸಿದರು. ಪ್ರಮುಖರಾದ ಅಮರಪ್ಪ ಗದ್ದಿ, ಹನುಮೇಶ ನಾಯಕ, ರಮೇಶ ನಾಯಕ ಇತರರಿದ್ದರು.
Published on

ಕನಕಗಿರಿ: ಹುಲಿಹೈದರ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ಸಹೋದರತ್ವ, ಸಹಬಾಳ್ವೆಯಿಂದ ಜೀವನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ ವರ್ಷ ಮೊಹರಂ ಬಳಿಕ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಘರ್ಷಣೆಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಿಂದ ಆ ಕುಟುಂಬಗಳು ಸಂಕಷ್ಟದಲ್ಲಿರುವುದು ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಶಾಂತಿಯ ತೋಟವನ್ನಾಗಿಸಬೇಕು ಎಂದರು.

ಹುಲಿಹೈದರ ಜನತೆ ಹೆಚ್ಚಿನ ಮತಗಳು ನೀಡಿದ್ದಕ್ಕೆ ಋಣಿಯಾಗಿದ್ದು, ಮುಂದಿನ ದಿನಗಳಲ್ಲಿ ಹುಲಿಹೈದರಗೆ ಮೂಲ ಸೌಲಭ್ಯವನ್ನು ಒದಗಿಸುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಜನರ ಸಹಕಾರ ಅಗತ್ಯ ಎಂದರು.

ಸಚಿವ ತಂಗಡಗಿ ಅವರನ್ನು ಗ್ರಾಪಂ ಅಧ್ಯಕ್ಷೆ ಶರಣಮ್ಮ, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಗೌರವಿಸಿದರು. ಪಿಡಿಒ ಅಮರೇಶ ರಾಠೋಡ್, ಪ್ರಮುಖರಾದ ಹನುಮೇಶ ನಾಯಕ, ರಮೇಶ ನಾಯಕ, ಅಮರಪ್ಪ ಗದ್ದಿ, ಹನುಮೇಶ ಹುಳ್ಕಿಹಾಳ, ಹನುಮಂತಪ್ಪ ಗೋಡಿ, ಅಶೋಕ ಜಾಡಿ, ಸೋಮನಾಥ ಗದ್ದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net