ಚಿತ್ರದುರ್ಗ ಜಿಲ್ಲೆಯಲ್ಲೇ ಉತ್ತಮ ರಸ್ತೆ ನಿರ್ಮಾಣ: ಶಾಸಕ ಚಂದ್ರಪ್ಪ ಭರವಸೆ

BRM speech 01
Published on

ಭರಮಸಾಗರ (ಚಿತ್ರದುರ್ಗ ಜಿಲ್ಲೆ ): ಜನರ ಋಣ ತೀರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ, ಶಾಸಕ ಎಂ.ಚಂದ್ರಪ್ಪ ಹೇಳಿದರು.

ಭರಮಸಾಗರ-ಬಿಳಿಚೋಡು-ಬಿದರಿಕೆರೆ ಮಾರ್ಗಗಳ ರಸ್ತೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಸಿಸಿ ರಸ್ತೆ, ಸಮುದಾಯ ಭವನ, ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದರು.

ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ರಸ್ತೆಗಳು ಜಿಲ್ಲೆಯಲ್ಲೇ ಉತ್ತಮ ರಸ್ತೆಗಳಾಗಿ ಪರಿಣಮಿಸಲಿವೆ ಎಂದು ಹೇಳಿದರು.

ಪಟ್ಟಣದ ತ್ಯಾಜ್ಯ ನೀರು ಕೆರೆ ಸೇರುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಮಾಡಿಸಿ ಯಜಿಡಿ ಮಾದರಿಯಲ್ಲಿ ಪ್ರತ್ಯೇಕ ಮಾಡಲಾಗುವುದು ಎಂದರು.

ಮಾಜಿ ಮಂಡಲ ಅಧ್ಯಕ್ಷ ಸಾಮಿಲ್ ಶಿವಣ್ಣ ಮಾತನಾಡಿದರು. ಮಂಡಲ ಅಧ್ಯಕ್ಷ ಶೈಲೇಶ್‌ಕುಮಾರ್, ಬೆಸ್ಕಾಂ ನಿವೃತ್ತ ಅಧಿಕಾರಿ ಚಂದ್ರಶೇಖರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಬಿಜೆಪಿ ಮುಖಂಡರಾದ ಮಂಜುನಾಥ್, ಪ್ರವೀಣ್, ಸಿದ್ದಲಿಂಗಪ್ಪ, ನಾರಾಯಣರಾವ್, ಕಲ್ಲೇಶ್, ಮೂರ್ತಿ, ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net