ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ರಾಮಚಂದ್ರು ಆಯ್ಕೆ: ನೂತನ ವರಿಷ್ಠರನ್ನು ಅಭಿನಂದಿಸಿದ ನಿರ್ದೇಶಕರು

District Cooperative Union Mandya
Published on

ಮಂಡ್ಯ: ಜಿಲ್ಲಾ ಸಹಕಾರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದಲ್ಲಿರುವ ಒಕ್ಕೂಟದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಡೇನಹಳ್ಳಿ ರಾಮಚಂದ್ರು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ಅನಿತಾ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು.

ಬಳಿಕ ಮಾತನಾಡಿದ ರಾಮಚಂದ್ರು, ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಸಂಸ್ಥೆಗಳಿಗೆ ಶಿಕ್ಷಣ, ತರಬೇತಿ ಪ್ರಚಾರ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಹೆಚ್ಚಿನ ತರಬೇತಿ ನೀಡಲು ಶ್ರಮಿಸುತ್ತೇನೆ. ಜಿಲ್ಲಾ ಸಹಕಾರ ಯೂನಿಯನ್‌ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷರನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಒಕ್ಕೂಟದ ಉಪಾಧ್ಯಕ್ಷ ಎಂ.ಎನ್.ವಿಜಯ್‌ಕುಮಾರ್, ನಿರ್ದೇಶಕರಾದ ಬೂದನೂರು ಸ್ವಾಮಿ, ಎಂ.ಕೆ. ಸುಂದ್ರಪ್ಪ, ವಿ.ಎಸ್.ನಿಂಗೇಗೌಡ, ಕೆ.ಎಸ್.ಪ್ರೇಮಾ, ಕೃಷ್ಣೇಗೌಡ, ಸಿ.ರಾಜು, ನರಸಿಂಹಮೂರ್ತಿ, ಮುರಳೀಧರ್, ಎಸ್.ಬಿ.ಸಿದ್ದರಾಮೇಗೌಡ, ಜಿ.ಕೆ.ಶಿವಕುಮಾರ್, ಎಸ್.ನಾಗೇಂದ್ರ, ಮನುಜ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net