

ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಅಭಿವೃದ್ಧಿಯಲ್ಲಿ ಯುವಕರು ಮತ್ತು ಸಹಕಾರ ಕ್ಷೇತ್ರ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಎಸ್. ಎಸ್. ಪಟ್ಟಣಶೆಟ್ಟಿ ಹೇಳಿದರು.
ಜಿಲ್ಲಾ ಸಹಕಾರ ಸಂಘದಿಂದ ಶಾಲಾ ಮಕ್ಕಳಿಗಾಗಿ ಜರುಗಿದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ವಿಜೇತರಿಗೆ ತೊಂಟದಾರ್ಯ ವಿದ್ಯಾಪಿಠದಲ್ಲಿ ಬುಧವಾರ ಏರ್ಪಡಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಬಲಪಡಿಸಲು ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ತರೆದಿದೆ. ಸಹಕಾರ ಕ್ಷೇತ್ರದಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿದೆ ಎಂದರು.
ಸಹಕಾರ ಸಂಘದ ಉಪನಿಬಂಧಕ ಎಸ್. ಎಸ್. ಕಬಾಡೆ ಮಾತನಾಡಿ, ಸಹಕಾರ ಸಂಸ್ಥೆಗಳನ್ನು ಬಲಪಡಿಸಲು, ಆಧನೀಕರಿಸಲು ಹಾಗೂ ಪ್ರಜಾ ಪ್ರಭುತ್ವದ ಅತೀ ದೊಡ್ಡ ಟಕವನ್ನು ಬಲಪಡಿಸಲು ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಲಾಗಿದೆ. ಸಹಕಾರದಿಂದ ಸಮೃದ್ಧಿಯೆಂಬ ಧ್ಯೇಯವನ್ನು ಪ್ರಗತಿಯತ್ತ ಕೊಂಡ್ಯೊಲು ಸಾಧ್ಯವಿದೆ ಎಂದರು.
ಜಿಲ್ಲಾ ಸಹಕಾರ ಸಂಘ ಅಧ್ಯಕ್ಷ ಸಿ. ಎಂ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಯೋಜನೆಗಳನ್ನು ಪ್ರಕಟಿಸಿದ್ದು, ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದರು.
ಬಾಕ್ಸ್:
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾಥಿರ್, ವಿದ್ಯಾಥಿರ್ನಿಯರುಗಳಿಗೆ ನಗದು ಬಹುಮಾನ, ಮೆಡಲ್, ಪ್ರಮಾಣ ಪತ್ರ ಹಾಗೂ ಪಾರಿತೊಷಕ ನೀಡಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಪಾರ್ವತಿ ಆಡವಾನಿ, ವಿದ್ಯಾ ಗೊಂಡಬಾಳ, ಸೃಷ್ಟಿ ಕಂಟಿಗೊಣ್ಣವರ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ಮಹಮ್ಮದ ಅಯಾನ, ಸುಶ್ಮೀತಾ ಆರೇರ, ತನುಜಾ ಓಲಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು.
ಎಸ್. ಬಿ. ಹಾವೇರಿ, ಬಿ. ಎಂ. ಬಿಳೆಯಲಿ, ಎಂ. ಸಿ. ಉಪ್ಪಿನ, ಡಿ. ಆರ್. ವೆಂಕಟರಾಮ, ಆರ್. ಎಸ್. ಕಲ್ಲನಗೌಡರ, ಚಂದ್ರಶೇಖರ ಕರಿಯಪ್ಪನವರ ಇತರರು ಇದ್ದರು.