ಜಿಲ್ಲೆಯಲ್ಲಿ ಮುಂದುವರಿದ ಮಳೆ, ತುಂಬಿ ಹರಿದ ಹೊಳೆ

0101
Published on

ಬೆಳಗಾವಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರ ಇಡೀ ದಿನ ಮುಂದುವರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು.

ನಗರದಲ್ಲಿ ಶುಕ್ರವಾರ ರಾತ್ರಿಯಿಂದಲೇ ಜಿಟಿಜಿಟಿ ಹಾಗೂ ಜಿಲ್ಲೆಯ ವಿವಿಧೆಡೆ ಜೋರಾಗಿ ಮಳೆಸುರಿದಿದೆ. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಶನಿವಾರ 11.2 ಮಿ.ಮೀ. ಮಳೆಯಾಗಿದೆ. ಗೋಕಾಕ, ಖಾನಾಪುರ ಹಾಗೂ ಬೆಳಗಾವಿ ತಾಲೂಕಿನಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಆಗಾಗ ಜೋರಾಗಿ ಮಳೆಯಾಯಿತು.

ಚರಂಡಿ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿರುವ ಶಹಾಪುರ, ಖಾಸಬಾಗ್ ಹಾಗೂ ಟಿಳಕವಾಡಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ಜನ ಪರದಾಡಿದರು. ಸಾರ್ವಜನಿಕರು ಛತ್ರಿ, ರೇನ್‌ಕೋಟ್ ಧರಿಸಿ ಮಳೆಯಲ್ಲಿ ಸಂಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net